alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಮಿಕರು, ದ್ವಿಚಕ್ರವಾಹನ ಸವಾರರಿಗೆ ಇಲ್ಲಿದೆ ಶುಭ ಸುದ್ದಿ

ಹೈದರಾಬಾದ್: ದ್ವಿಚಕ್ರವಾಹನ ಸವಾರರಿಗೆ ಎಲ್ಲೆಡೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೀಗಿದ್ದರೂ ವಿವಿಧ ಕಾರಣಗಳಿಂದ ಹೆಲ್ಮೆಟ್ ಬಳಸಲು ಅನೇಕ ದ್ವಿಚಕ್ರವಾಹನ ಸವಾರರು ಹಿಂದೇಟು ಹಾಕ್ತಾರೆ.

ಬಿರು ಬಿಸಿಲಿನಲ್ಲಿ ಹೆಲ್ಮೆಟ್ ಧರಿಸಿ ತೊಂದರೆ ಅನುಭವಿಸುತ್ತಿರುವವರಿಗೆ ಅನುಕೂಲವಾಗುವಂತಹ ಎ.ಸಿ. ಹೆಲ್ಮೆಟ್(ಹವಾನಿಯಂತ್ರಿತ) ಅನ್ನು ಹೈದರಾಬಾದ್ ಯುವಕರು ತಯಾರಿಸಿದ್ದಾರೆ. ಹೈದರಾಬಾದ್ ನ ಜಾರ್ಶ್ ಸ್ಟಾರ್ಟಪ್ ನ ಟೆಕ್ಕಿಗಳ ಪ್ರಯತ್ನದಿಂದ ಈ ಎ.ಸಿ. ಹೆಲ್ಮೆಟ್ ರಚಿಸಲಾಗಿದೆ.

ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಳಸಲು ಅನುಕೂಲವಾಗುವಂತೆ ಇದನ್ನು ರೂಪಿಸಿದ್ದು, ದ್ವಿಚಕ್ರವಾಹನ ಸವಾರರಿಗೂ ಅನುಕೂಲವಾಗುವಂತೆ ರೂಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕೌಸ್ತುಬ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ, ಆನಂದ ಕುಮಾರ್ ಅವರು ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿರುವ ಹೆಲ್ಮೆಟ್ ನಲ್ಲಿ ಚಾರ್ಜರ್ ಇದ್ದು, ಮೊಬೈಲ್ ರೀತಿಯಲ್ಲಿ ಅದನ್ನು ಚಾರ್ಜ್ ಮಾಡಿಕೊಂಡು 2 ರಿಂದ 8 ಗಂಟೆಗಳ ಕಾಲ ಹೆಲ್ಮೆಟ್ ಬಳಸಬಹುದು. ಇದರಿಂದ ತಂಪಿನ ಅನುಭವವಾಗಲಿದೆ.

ಈ ಎ.ಸಿ. ಹೆಲ್ಮೆಟ್ 250 ಗ್ರಾಂ ತೂಕವಿದ್ದು, 5000 ರೂ. ದರವಿದೆ. ಕಾಮಗಾರಿ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಬಳಸಲು ಅನುಕೂಲವಾಗಲಿದೆ.

2016 ರಲ್ಲಿ ಬಚಪಲ್ಲಿಯ VNR ವಿಜ್ಞಾನ ಜ್ಯೋತಿ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಈ ಹೆಲ್ಮೆಟ್ ಅಭಿವೃದ್ಧಿಪಡಿಸಿದ್ದು, ಅದನ್ನು ಈ ಟೆಕ್ಕಿಗಳು ಆಧುನಿಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಪರೀಕ್ಷಿಸಲು ನೌಕಾಪಡೆ ಕಮಾಂಡೊಗಳಿಗೆ, ಸಂಚಾರ ಪೊಲೀಸರು ಹಾಗೂ ಕಾರ್ಮಿಕರಿಗೆ ನೀಡಲಾಗಿದ್ದು, ಅವರಿಂದ ಉತ್ತಮ ಪ್ರತಿಕ್ರಿಯೆ, ಸಲಹೆ ಬಂದಿವೆ. ಅವುಗಳನ್ನು ಆಧರಿಸಿ ಎ.ಸಿ. ಹೆಲ್ಮೆಟ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಯಾರಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...