alex Certify
ಕನ್ನಡ ದುನಿಯಾ       Mobile App
       

Kannada Duniya

23 ಸಾವಿರ ರೂ. ಬೆಲೆಯ ಈ ವಾಚ್ ನಲ್ಲಿದೆ ವಿಶೇಷತೆ

Titan-Juxt-Pro-Indiaದೇಶದ ಪ್ರಖ್ಯಾತ ವಾಚ್ ತಯಾರಿಕಾ ಕಂಪನಿ ಟೈಟಾನ್, ಹೆಚ್.ಪಿ. ಸಹಯೋಗದೊಂದಿಗೆ ತಯಾರಿಸಿರುವ Juxt Pro ಸ್ಮಾರ್ಟ್ ವಾಚ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಈ ವಾಚ್ ಬೆಲೆ 22,995 ರೂ. ಗಳಾಗಿದ್ದು, ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ.

ಈ ವಾಚ್ ನಲ್ಲಿ 1.3 ಐಪಿಎಸ್ ಎಲ್ ಸಿ ಡಿ ಡಿಸ್ ಪ್ಲೇಯೊಂದಿಗೆ 360×360 ಪಿಕ್ಸೆಲ್ ರೆಸಲ್ಯೂಶನ್ ಇದೆ. ಸುರಕ್ಷತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನ್ನು ಇದರಲ್ಲಿ ಬಳಸಲಾಗಿದೆ. 1GHz ಇಂಟೆಲ್ ಡ್ಯೂಯಲ್ ಕೋರ್ ಪ್ರೊಸೆಸರ್ ಇದಕ್ಕಿದ್ದು, 512 ಎಂಬಿ ರ್ಯಾಮ್ ಹಾಗೂ 4 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.

ಈ ವಾಚ್ ನಲ್ಲಿ ಮೆಸೇಜ್, ಇ ಮೇಲ್ ವೀಕ್ಷಿಸಬಹುದಲ್ಲದೇ ಫೋನ್ ಕರೆಗಳನ್ನು ಸ್ವೀಕರಿಸಿ ಮಾತನಾಡಬಹುದಾಗಿದೆ. 30 ಮೀಟರ್ ಆಳದವರೆಗಿನ ನೀರಿಗೆ ಬಿದ್ದರೂ ವಾಚ್ ಗೆ ಹಾನಿಯಾಗುವುದಿಲ್ಲವೆನ್ನಲಾಗಿದೆ. ಅಲ್ಲದೇ ತುರ್ತು ಸಂದರ್ಭಗಳಲ್ಲಿ ಹತ್ತಿರದವರಿಗೆ ಸ್ಥಳದ ಮಾಹಿತಿಯನ್ನೂ ಈ ವಾಚ್ ರವಾನಿಸುತ್ತದೆ. ಫಿಟ್ನೆಸ್, ಕ್ಯಾಲೆಂಡರ್, ಟೈಮರ್, ಸೆನ್ಸರ್ ಸೇರಿದಂತೆ ಹಲವು ಆಪ್ ಗಳು ಈ ವಾಚ್ ನಲ್ಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...