alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಸಾಗಾಟಕ್ಕೆ ಆಕಾಶ ಮಾರ್ಗ ಬಳಕೆ

vimana

ನವದೆಹಲಿ: 1000 ರೂ. ಹಾಗೂ 500 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರದಲ್ಲಿ, ಜನರ ಕೈಯಲ್ಲಿ ಹಣವಿಲ್ಲದೇ ಆರ್ಥಿಕ ವ್ಯವಹಾರಕ್ಕೆ ಹಿನ್ನಡೆಯಾಗಿದೆ.

ಇದನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮುಖ್ಯ ವಿತರಣಾ ಕೇಂದ್ರಗಳಿಂದ ಬ್ಯಾಂಕ್ ಗಳಿಗೆ ಹಣ ಸಾಗಿಸಲು ಹೆಲಿಕಾಪ್ಟರ್, ವಿಮಾನವನ್ನು ಬಳಸಲು ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಂಡಿದೆ. ಹಣ ಸಾಗಿಸಲು ಹಿಂದೆ 21 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಇದನ್ನು 6 ದಿನಗಳಿಗೆ ಇಳಿಕೆ ಮಾಡಿದ್ದು, ತ್ವರಿತ ಗತಿಯಲ್ಲಿ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ನಗರ ಪ್ರದೇಶಗಳಲ್ಲಿ ಹಣ ವಿತರಣೆ ವ್ಯವಸ್ಥೆ ಸಹಜ ಸ್ಥಿತಿಯತ್ತ ಬರುತ್ತಿದೆ. ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಹಣ ತಲುಪಿಸಲು ಒತ್ತು ನೀಡಲಾಗಿದೆ.

ಒಂದೆರಡು ವಾರಗಳಲ್ಲಿ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಿಗದಿಪಡಿಸಿದ ಹಣ ಗ್ರಾಹಕರಿಗೆ ಸಮರ್ಪಕವಾಗಿ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ. ಬ್ಯಾಂಕ್ ಗಳಿಗೆ 6 ದಿನಗಳ ಮಿತಿಯಲ್ಲಿ ಹಣ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...