alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಖರೀದಿಸುವವರಿಗೊಂದು ಸಿಹಿ ಸುದ್ದಿ

ಸ್ಮಾರ್ಟ್ ಫೋನ್ ಈಗ ಬಹುತೇಕ ಎಲ್ಲರ ಬಳಿಯೂ ಇದ್ದು, ಇಂಟರ್ನೆಟ್ ದರವೂ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿರುವುದರಿಂದ ಬಹಳಷ್ಟು ಮಂದಿ ಬಹುತೇಕ ಸಮಯವನ್ನು ಸ್ಮಾರ್ಟ್ ಫೋನ್ ವೀಕ್ಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಜೊತೆಗೆ ವಿಡಿಯೋಗಳ ಸತತ ವೀಕ್ಷಣೆಯಿಂದಾಗಿ ಸ್ಮಾರ್ಟ್ ಫೋನಿನ ಬ್ಯಾಟರಿ ಬಹು ಬೇಗ ಖಾಲಿಯಾಗುತ್ತಿದ್ದ ಕಾರಣ ಫಜೀತಿಯಾಗುತ್ತಿತ್ತು. ಆದರೆ ಇನ್ನು ಮುಂದೆ ಅದಕ್ಕೆ ತೆರೆ ಬೀಳಲಿದೆ.

ಬಹಳಷ್ಟು ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆಯಾಗುತ್ತಿರುವ ಪ್ರೊಸೆಸರ್ ನ ತಯಾರಿಕಾ ಸಂಸ್ಥೆ Qualcomm ಈ ವರ್ಷ ಬಿಡುಗಡೆ ಮಾಡಲಿರುವ ಸ್ನ್ಯಾಪ್ ಡ್ರ್ಯಾಗನ್ 845 ಕುರಿತು ಮಹತ್ವದ ಮಾಹಿತಿ ನೀಡಿದೆ.

ಕಳೆದ ವರ್ಷದ ಸ್ನ್ಯಾಪ್ ಡ್ರ್ಯಾಗನ್ 835 ರ ಅಭಿವೃದ್ಧಿಪಡಿಸಿದ ವರ್ಷನ್ ಇದಾಗಿದ್ದು, ಸ್ನ್ಯಾಪ್ ಡ್ರ್ಯಾಗನ್ 835 ಗೆ ಹೋಲಿಸಿದರೆ ಬ್ಯಾಟರಿ ಕ್ಷಮತೆ ಶೇ. 30 ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಜೊತೆಗೆ ಅತಿ ವೇಗದಲ್ಲಿ ಚಾರ್ಜ್ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...