alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಮದುವೆ ಆಹ್ವಾನ ಪತ್ರಿಕೆಯ ಬೆಲೆ 1.5 ಲಕ್ಷ ರೂ…?

ಇಡೀ ವಿಶ್ವವೇ ಈಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದ್ವೆ ಬಗ್ಗೆ ಮಾತಾಡ್ತಿದೆ. ಸದ್ಯದಲ್ಲೇ ಮತ್ತೊಂದು ವೈಭವೋಪೇತ ಮದುವೆ ಇದೇ ರೀತಿ ಸುದ್ದಿಯಾಗೋದ್ರಲ್ಲಿ ಅನುಮಾನವೇ ಇಲ್ಲ. ಅದ್ಯಾರ್ದು ಗೊತ್ತಾ? ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರನದ್ದು.

ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಸದ್ಯದಲ್ಲೇ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಅಂತಾ ಹೇಳಲಾಗ್ತಿದೆ. ಆಕಾಶ್ ಅಂಬಾನಿ ಮದುವೆ ಆಹ್ವಾನ ಪತ್ರಿಕೆ ಕೂಡ ವೈರಲ್ ಆಗಿದೆ. ಇದು ಭಾರತದಲ್ಲಿ ತಯಾರಾಗಿರೋ ಅತ್ಯಂತ ದುಬಾರಿ ಆಹ್ವಾನ ಪತ್ರಿಕೆ.

ಒಂದು ಆಹ್ವಾನ ಪತ್ರಿಕೆಗೆ ಖರ್ಚಾಗಿರೋ ಹಣದಲ್ಲಿ ನೀವು ಐಫೋನ್ ಎಕ್ಸ್ ಖರೀದಿ ಮಾಡಬಹುದು. ಯಾಕಂದ್ರೆ ಇದರ ಬೆಲೆ ಬರೋಬ್ಬರಿ 1.5 ಲಕ್ಷ ರೂಪಾಯಿಯಂತೆ. ವೆಡ್ಡಿಂಗ್ ಕಾರ್ಡ್ ಅನ್ನು ಚಿನ್ನದಿಂದ್ಲೇ ಅಲಂಕರಿಸಲಾಗಿದೆ. ಮುಕೇಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿ, ಪ್ರಖ್ಯಾತ ಉದ್ಯಮಿಯೂ ಹೌದು.

ಹಾಗಾಗಿ ಪುತ್ರನ ಮದುವೆಯನ್ನು ಆಡಂಬರದಿಂದ ಮಾಡಲು ಪ್ಲಾನ್ ಹಾಕಿದ್ದಾರೆ ಅಂತಾ ಹೇಳಲಾಗ್ತಿದೆ. ಈ ಆಹ್ವಾನ ಪತ್ರಿಕೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಜೋಕ್ ಗಳು ಕೂಡ ಹರಿದಾಡುತ್ತಿವೆ. ಅಂಬಾನಿ ದುಂದುವೆಚ್ಚ ಮಾಡ್ತಿದ್ದಾರೆ ಅಂತಾ ಕೆಲವರು ಟೀಕಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...