alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೋನ್ ಮೂಲಕ ಮನೆ ಬಾಗಿಲಿಗೆ ಬರುತ್ತೆ ಬೆಳಗಿನ ಚಾಯ್…!

ಟೆಕ್ನಾಲಜಿ ಅಭಿವೃದ್ಧಿ ಹೊಂದಿದಂತೆಲ್ಲಾ ಮಾನವನ ಕೆಲಸ ಸುಲಭವಾಗುತ್ತಿದೆ. ಕುಳಿತಲ್ಲೇ ತಾನು ಬಯಸಿದ್ದನ್ನು ಪಡೆಯುವ ಸೌಲಭ್ಯ ಈಗ ಲಭ್ಯವಾಗುತ್ತಿದೆ.

ಲಕ್ನೋ ಮೂಲದ ಸ್ಟಾರ್ಟಪ್ ಕಂಪನಿಯೊಂದು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಡ್ರೋನ್ ಮೂಲಕ ಮನೆ ಬಾಗಿಲಿಗೆ ಬೆಳಗಿನ ಚಾಯ್ ಸರಬರಾಜು ಮಾಡಲು ಸಜ್ಜಾಗಿದೆ.

ಲಕ್ನೋದ ಟೆಕ್ ಈಗಲ್ ಸ್ಟಾರ್ಟಪ್ ಕಂಪನಿ ಈ ಡ್ರೋನ್ ಅಭಿವೃದ್ಧಿಪಡಿಸಿದ್ದು, 10 ಕಿ.ಮೀ. ವ್ಯಾಪ್ತಿಯೊಳಗೆ ಸಂಚರಿಸುವ ಇದು 2 ಲೀಟರ್ ಚಾಯ್ ಅನ್ನೋ ಹೊತ್ತೊಯ್ಯಲಿದೆ.

ಆನ್ ಲೈನ್ ಕಾಕಾ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಟೆಕ್ ಈಗಲ್, ಡ್ರೋನ್ ಹಾರಾಟಕ್ಕೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಗ್ರಾಹಕರಿಗೆ ಅವರ ಮನೆ ಬಾಗಿಲಿಗೇ ಚಾಯ್ ಪೂರೈಸುವುದಾಗಿ ತಿಳಿಸಿದೆ.

ಈ ಡ್ರೋನ್ ಗಳಲ್ಲಿ ಜಿಪಿಆರ್ಎಸ್ ಅಳವಡಿಸಲಾಗಿದ್ದು, ಹೀಗಾಗಿ ಚಾಯ್ ಆರ್ಡರ್ ಮಾಡಿದ ಗ್ರಾಹಕರಿಗೆ ನಿಖರವಾಗಿ ಅವರ ಮನೆ ಬಾಗಿಲಿಗೆ ಡೆಲಿವರಿ ಮಾಡಲಿದೆ ಎಂದು ಸ್ಟಾರ್ಟಪ್ ಕಂಪನಿ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...