alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಕಳುವಾಗಿದ್ದರೆ ಚಿಂತೆ ಬೇಡ

ಆಧಾರ್ ಕಾರ್ಡ್ ಎಷ್ಟು ಮಹತ್ವದ್ದು ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲ ಸೇವೆಗಳಿಗೆ ಅಗತ್ಯವಾಗಿರುವ ಆಧಾರ್ ಕಾರ್ಡ್ ಕಳೆದು ಹೋದ್ರೆ ತಲೆನೋವು ಶುರುವಾಗುತ್ತದೆ. ಮತ್ತೊಮ್ಮೆ ಹೇಗಪ್ಪ ಆಧಾರ್ ಕಾರ್ಡ್ ಪಡೆಯೋದು ಎಂಬ ಚಿಂತೆ ಕಾಡುತ್ತದೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ. ಅಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್ ತಯಾರಿಸೋದು ಹೇಗೆ ಅಂತಾ ನಾವು ಹೇಳ್ತೇವೆ.

ಮತ್ತೊಂದು ಆಧಾರ್ ಕಾರ್ಡ್ ತಯಾರಿಸಲು ಅವಶ್ಯವಾಗಿ ಎನ್ರೋಲ್ಮೆಂಟ್ ಸ್ಲಿಪ್ ಅವಶ್ಯಕತೆಯಿದೆ. ಅದ್ರಲ್ಲಿರುವ ನಂಬರ್ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ತಿಳಿಯಬಹುದು. ಯುಐಡಿಎಐ ಅಧಿಕೃತ ವೆಬ್ ಸೈಟ್ www.uidai.gov.in ಗೆ ಹೋಗಿ ಸೆಲೆಕ್ಷನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತ್ರ ರೆಸಿಡೆಂಟ್ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ.

ಇದ್ರಲ್ಲಿ ನಿಮಗೊಂದು ಮಹಿಳೆ ಚಿತ್ರ ಕಾಣಲಿದೆ. ಅದ್ರ ಕೆಳಗೆ EID / UIDಆಯ್ಕೆ ಕಾಣಲಿದೆ. ಎನ್ರೋಲ್ಮೆಂಟ್ ಸ್ಲಿಪ್ ಕಳುವಾಗಿದ್ದರೆ ಇಐಡಿ ಮೇಲೆ ಆಧಾರ್ ಕಾರ್ಡ್ ಕಳುವಾಗಿದ್ದರೆ ಯುಐಡಿ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತ್ರ ಒಂದು ಫಾರ್ಮ್ ಸಿಗಲಿದೆ.

ಫಾರ್ಮ್ ನಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಬೇಕು. ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಮೊಬೈಲ್ ನಂಬರ್ ಗೆ ಇಐಡಿ ಅಥವಾ ಯುಐಡಿ ನಂಬರ್ ಬರಲಿದೆ. ಆಧಾರ್ ಕಾರ್ಡ್ ನ ಸ್ಟೇಟಸ್ ಪರಿಶೀಲನೆ ಮಾಡಲು https://eaadhaar.uidai.gov.in/ ಅಥವಾ https://portal.uidai.gov.in/uidwebportal/enrolmentStatusShow.doಗೆ ಹೋಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...