alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಉಳಿಸಬೇಕೆಂದರೆ ಅನುಸರಿಸಿ ಈ ಉಪಾಯ

ದಿನೇ ದಿನೇ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕೆಲವೇ ಕಿಲೋಮೀಟರ್ ದೂರ ಚಲಿಸೋದು ಕೂಡ ದುಬಾರಿಯಾಗಿಬಿಟ್ಟಿದೆ. ಇಂತಾ ಸಂದರ್ಭದಲ್ಲಿ ಆಪ್ತಮಿತ್ರನಂತೆ ನೆರವಿಗೆ ಬರಲಿದೆ ಗೂಗಲ್ ಮ್ಯಾಪ್ ನ ಒಂದು ಟ್ರಿಕ್ಸ್.

ತುಂಬಾ ಸರಳವಾಗಿರುವ ಕೆಲ ಸೂತ್ರಗಳನ್ನ ತಿಳಿದುಕೊಂಡು ಬಿಟ್ಟರೆ ತ್ರಾಸವಿಲ್ಲದೆ ನೀವು ತಲುಪಬೇಕಾದ ಸ್ಥಳವನ್ನು ತಲುಪಬಹುದು. ನೀವು ತಲುಪಬೇಕಾದ ಸ್ಥಳಗಳಲ್ಲಿ ಟ್ರಾಫಿಕ್ ಇದೆಯಾ…? ನೀವು ತಲುಪಬೇಕಾದ ಸ್ಥಳವನ್ನು ತಲುಪೋಕೆ ಎಷ್ಟು ಮಾರ್ಗಗಳಿವೆ ಅನ್ನೋ ಸಂಪೂರ್ಣ ಮಾಹಿತಿಯನ್ನ ನಿಮ್ಮ ಸ್ಮಾರ್ಟ್ಫೋನ್ ಗಳ ಮೂಲಕವೇ ತಿಳಿದುಕೊಳ್ಳಬಹುದು.

ರೂಟ್ ಮ್ಯಾಪ್ ಗಿಂತಲೂ ಕೊಂಚ ಭಿನ್ನವಾಗಿದೆ ಈ ಟ್ರಿಕ್ಸ್. ಮೊದಲಿಗೆ ಗೂಗಲ್ ಮ್ಯಾಪ್ ಓಪನ್ ಮಾಡಿದ ಬಳಿಕ ನೀವು ಪ್ರಯಾಣ ಆರಂಭಿಸುವ ಸ್ಥಳವನ್ನು ಮೊದಲು ಮಾರ್ಕ್ ಮಾಡಿಕೊಳ್ಳಿ. ನಂತರದಲ್ಲಿ ತಲುಪಬೇಕಾದ ಸ್ಥಳವನ್ನು ಟೈಪ್ ಮಾಡಿ.

ಬಳಿಕ ನೀವು ಪ್ರಯಾಣ ಆರಂಭಿಸುವ ಸ್ಥಳದಿಂದ ತಲುಪಬೇಕಾದ ಸ್ಥಳ ಎಷ್ಟು ದೂರ ಇದೆ ಅನ್ನೋ ಮಾಹಿತಿ ಸಿಗುತ್ತೆ. ಆ ಸ್ಥಳವನ್ನು ತಲುಪೋಕೆ ಇರುವ ಇತರೆ ಮಾರ್ಗಗಳ ಬಗ್ಗೆ, ಅದಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಅನ್ನೋ ಮಾಹಿತಿಯೂ ಅಲ್ಲೇ ಸಿಗಲಿದೆ. ಡ್ರ್ಯಾಗ್ ಮ್ಯಾಪ್ ಆಪ್ಶನ್ ನಲ್ಲಿಯೂ ಹಲವು ಪ್ರಯೋಜನಗಳನ್ನ ನೀವು ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...