alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ 8 ಗಂಟೆ ಬಳಿಕ ಇಲ್ಲಿ ಬಂದ್ ಆಗಲಿವೆ ಕಂಪ್ಯೂಟರ್ಸ್

ದಕ್ಷಿಣ ಕೊರಿಯಾ ಸರ್ಕಾರ, ನೌಕರರು ಅತಿಯಾಗಿ ಕೆಲಸ ಮಾಡುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ತಿದೆ. ಕೆಲಸದ ಅವಧಿ ಮುಗಿದ ತಕ್ಷಣ ಉದ್ಯೋಗಿಗಳು ಕಚೇರಿ ತೊರೆಯುವಂತೆ ಮಾಡುವುದು ಸರ್ಕಾರದ ಉದ್ದೇಶ. ನೌಕರರು ಓವರ್ ಟೈಮ್ ಕೆಲಸ ಮಾಡೋದನ್ನು ತಡೆಯಲು ಕಂಪ್ಯೂಟರ್ ಗಳನ್ನೇ ಆಫ್ ಮಾಡಲಾಗ್ತಿದೆ.

ಮೂರು ಹಂತಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಮಾರ್ಚ್ 30ರಿಂದ ದಕ್ಷಿಣ ಕೊರಿಯಾದ ಎಲ್ಲಾ ಕಚೇರಿಗಳಲ್ಲೂ ರಾತ್ರಿ 8 ಗಂಟೆಗೆ ಕಂಪ್ಯೂಟರ್ ಆಫ್ ಆಗಲಿದೆ. ಏಪ್ರಿಲ್ ತಿಂಗಳಿನಲ್ಲಿ ರಾತ್ರಿ 7.30ಕ್ಕೆ ಕಂಪ್ಯೂಟರ್ ಆಫ್ ಮಾಡಲಾಗುತ್ತದೆ.

ಮೇ ತಿಂಗಳಿನಿಂದ ಪ್ರತಿ ಶುಕ್ರವಾರ ರಾತ್ರಿ 7 ಗಂಟೆಗೆ ಎಲ್ಲಾ ಕಚೇರಿಗಳಲ್ಲಿ ಕಂಪ್ಯೂಟರ್ ಆಫ್ ಮಾಡಲಾಗುವುದು. ತೀರಾ ಅನಿವಾರ್ಯತೆಯಿದ್ದಾಗ ವಿನಾಯಿತಿ ನೀಡಿ ಅಂತಾ ಕೆಲವು ಸಂಸ್ಥೆಗಳು ಮನವಿ ಮಾಡಿಕೊಂಡಿವೆ. ಆದ್ರೆ ಅದಕ್ಕೆ ಸಮ್ಮತಿ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ.

ದಕ್ಷಿಣ ಕೊರಿಯಾದಲ್ಲಿ ಅತಿಯಾದ ಕೆಲಸದ ಒತ್ತಡದಿಂದ ಹಲವರು ದೀರ್ಘಕಾಲದ ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಸಿಯೋಲ್ ನಲ್ಲಿ ಪ್ರತಿ ಉದ್ಯೋಗಿ ವರ್ಷಕ್ಕೆ ಸರಾಸರಿ 1000 ಗಂಟೆ ಹೆಚ್ಚು ಕೆಲಸ ಮಾಡುತ್ತಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...