alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗ ಹುಡುಕುವವರಿಗೊಂದು ಉಪಯುಕ್ತ ಮಾಹಿತಿ

ಈಗೆಲ್ಲಾ ಟೆಕ್ನಾಲಜಿ ಯುಗ. ಎಲ್ಲವೂ ಕುಳಿತಲ್ಲಿಂದಲೇ ಆಗುತ್ತೆ. ಇದರಲ್ಲಿ ಕೆಲಸ ಹುಡುಕೋದೂ ಒಂದು. ಮೊದಲಿನಂತೆ ಕೆಲಸಕ್ಕಾಗಿ ಅಲೆದಾಡಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ನೀವು ನಿಮಗೆ ಬೇಕಾದಂಥ ಕೆಲಸ ಹುಡುಕಬಹುದು. ಆದ್ರೆ ಅದಕ್ಕಿಂತ ಮುನ್ನ ಕೆಲವೊಂದಿಷ್ಟು ವಿಷಯಗಳು ನಿಮ್ಮ ಗಮನದಲ್ಲಿರಬೇಕು.

ಸೋಶಿಯಲ್ ಮೀಡಿಯಾದಲ್ಲಿ ನೀವು ಆಕ್ಟಿವ್ ಆಗಿರಬೇಕು.

ಕೆಲಸಕ್ಕಾಗಿ ಅರ್ಜಿ ಹಾಕುವಾಗ ನೀವು ಸ್ಥಿರವಾಗಿರಬೇಕು. ನಿಖರವಾಗಿರಬೇಕು.

ಕೆಲಸಕ್ಕಾಯೇ ನೀವು ಬೇರೆಯದೇ ಆದ ಪ್ರೊಫೈಲ್ ಒಂದನ್ನು ಕ್ರಿಯೇಟ್ ಮಾಡಿ. ಮತ್ತು ವೈಯಕ್ತಿಕ ಕೆಲಸಕ್ಕೆ ಅದನ್ನು ಉಪಯೋಗಿಸಬೇಡಿ.

ನಿಮಗೆ ಗೊತ್ತಿರುವವರು ಅಂತರ್ಜಾಲದಲ್ಲೇ ನಿಮ್ಮನ್ನು ಶಿಫಾರಸು ಮಾಡಿದಲ್ಲಿ ನಿಮಗೆ ಖಂಡಿತಾ ಸಹಾಯವಾಗುತ್ತೆ.

ನಿಮ್ಮ ಕೆಲಸಕ್ಕೆ ಬೇಕಾಗುವಂಥವರನ್ನು ಅಥವಾ ನಿಮಗೆ ಮಹತ್ವ ಎನಿಸಿದವರ ಮನವಿಯನ್ನು  ಮಾತ್ರ ಸ್ವೀಕರಿಸಿ. ಎಲ್ಲರ ಮನವಿಗಳನ್ನು ಒಪ್ಪಿಕೊಳ್ಳಬೇಡಿ.

ನಿಮ್ಮ ಪ್ರೊಫೈಲ್ ಯೋಗ್ಯವಾಗಿದೆಯೇ ಹಾಗೂ ವೃತ್ತಿಪರವಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ನೀವು ಎಂಥ ವ್ಯಕ್ತಿ ಎಂಬುದನ್ನು ನಿಮ್ಮ ಸಾಮಾಜಿಕ ಮಾಧ್ಯಮ ಪ್ರತಿಬಿಂಬಿಸುತ್ತದೆ.

ನಿಮಗೆ ಸಂಬಂಧಿಸಿದ ಉದ್ಯೋಗ ಖಾತೆ ಬಗ್ಗೆ ಮಾಹಿತಿ ಇರಲಿ.

ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟವರ  ಸಣ್ಣದಾದರೂ ಉಪಯುಕ್ತವಾದ ಗುಂಪನ್ನು ರಚಿಸಿ ಮತ್ತು ಚರ್ಚಿಸಿ.

ವೃತ್ತಿಪರವಾಗಿ ಸೋಶಿಯಲ್ ಮೀಡಿಯಾ ಪ್ರೊಫೈಲ್ ಅನ್ನು ಅಪ್ ಡೇಟ್ ಮಾಡುತ್ತಿರಿ.

ನಿಮ್ಮ ಹೆಸರನ್ನು ಗೂಗಲ್ ಮಾಡಿ ಹಾಗೂ ಅದರಲ್ಲಿ ಯಾವ ರಿಸಲ್ಟ್ ಬರುತ್ತೆ ಎಂಬುದರ ಬಗ್ಗೆ ತಿಳಿದುಕೊಂಡಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...