alex Certify
ಕನ್ನಡ ದುನಿಯಾ       Mobile App
       

Kannada Duniya

ಏಪ್ರಿಲ್ 1ರಿಂದ ದುಬಾರಿಯಾಗಲಿದೆ ಈ ವಸ್ತು

these-things-to-get-costlier-from-one-april

2017 ರ ವಿತ್ತ ವರ್ಷ ಏಪ್ರಿಲ್ 1 ರಿಂದ ಶುರುವಾಗಲಿದೆ. ಏಪ್ರಿಲ್ 1ರ ನಂತ್ರ ಕೆಲ ವಸ್ತುಗಳು ದುಬಾರಿಯಾಗಲಿವೆ. ಇದ್ರಲ್ಲಿ ಸಿಗರೇಟು, ಬೆಳ್ಳಿಯ ಸಾಮಾನು, ಯಂತ್ರಗಳು, ಸಿಲಿವರ್ ಹಾಳೆ, ಬೆಳ್ಳಿ ಆಭರಣ ಹಾಗೂ ಸ್ಟೀಲಿನ ವಸ್ತುಗಳು ಹಾಗೂ ಸ್ಮಾರ್ಟ್ ಫೋನ್ ಗಳು ದುಬಾರಿಯಾಗಲಿವೆ. ಕೆಲ ಶುಲ್ಕ ಹಾಗೂ ತೆರಿಗೆಯಲ್ಲಾದ ಬದಲಾವಣೆಯಿಂದಾಗಿ ಬೆಲೆ ದುಬಾರಿಯಾಗಲಿದೆ.

ಪಾನ್ ಮಸಾಲಾ – ಗುಟ್ಕಾದ ಉತ್ಪಾದನಾ ಶುಲ್ಕ ಶೇಕಡಾ 10ರಿಂದ ಶೇಕಡಾ 12ರಷ್ಟು ಏರಿಕೆಯಾಗಲಿದೆ. ಹಾಗಾಗಿ ಗುಟ್ಕಾ ಬೆಲೆ ದುಬಾರಿಯಾಗಲಿದ್ದು, ಈ ಚಟವುಳ್ಳವರ ಜೇಬಿಗೆ ಕತ್ತರಿ ಬೀಳಲಿದೆ.

ಈ ಬಾರಿ ಬಜೆಟ್ ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ವೇಳೆ ವಿಧಿಸಲಾಗುವ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಹಾಗಾಗಿ ರೈಲ್ವೆ ಬುಕ್ಕಿಂಗ್ ಬೆಲೆ ಕಡಿಮೆಯಾಗಲಿದೆ.

ಮನೆ ಖರೀದಿಸುವ ಕನಸು ಕಂಡಿದ್ದರೆ ನಿಮಗೊಂದು ಖುಷಿ ಸುದ್ದಿ. ಮನೆಗಳ ಬೆಲೆ ಈ ಬಾರಿ ಇಳಿಕೆಯಾಗಲಿದೆ.

ಬೆಳ್ಳಿ ದುಬಾರಿಯಾಗಲಿದೆ. ಬೆಳ್ಳಿ ಸಾಮಗ್ರಿ ಹಾಗೂ ಆಭರಣ ಖರೀದಿ ಮಾಡುವವರು ಈಗಲೇ ಖರೀದಿ ಮಾಡಿದ್ರೆ ಬೆಸ್ಟ್.

ಪದೇ ಪದೇ ಸ್ಮಾರ್ಟ್ ಫೋನ್ ಬದಲಿಸುವವರಿಗೆ ಏಪ್ರಿಲ್ 1 ರ ನಂತ್ರ ಕಷ್ಟವಾಗಲಿದೆ. ಯಾಕೆಂದ್ರೆ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಹೆಚ್ಚಳವಾಗಲಿದೆ.

ಶುದ್ಧ ನೀರು ಕುಡಿಯ ಬಯಸುವವರಿಗೆ ಖುಷಿ ಸುದ್ದಿ. ಬೆಲೆ ಇಳಿಕೆಯಾಗಲಿದೆ.

ಕಾರ್ ಖರೀದಿಸುವವರಿಗೆ ಈ ವರ್ಷ ಬ್ಯಾಡ್ ಟೈಂ. ಈ ಬಾರಿ ಕಾರು ದುಬಾರಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...