alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ 1 ರಿಂದ ಸುಲಭವಾಯ್ತು ಈ ಎಲ್ಲ ಕೆಲಸ

ಡಿಸೆಂಬರ್ 1ರಿಂದ ಭಾರತದಲ್ಲಿ ಕೆಲವೊಂದು ಸೇವೆಗಳಲ್ಲಿ ಬದಲಾವಣೆಯಾಗಿದೆ. ಮನೆಯಲ್ಲಿಯೇ ಕುಳಿತು ಇಂದಿನಿಂದ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ. ಇದಕ್ಕಾಗಿ ಟೆಲಿಕಾಂ ಕಂಪನಿಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಯುಐಡಿಎಐ ತನ್ನ ವೆಬ್ ಸೈಟ್ ನಲ್ಲಿ ಹೇಗೆ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬೇಕೆನ್ನುವ ಬಗ್ಗೆ ಮಾಹಿತಿ ನೀಡಿದೆ. ನಿಮ್ಮ ಟೆಲಿಕಾಂ ಕಂಪನಿ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಬೇಕು. ಇದ್ರ ಜೊತೆಗೆ ಮೊಬೈಲ್ ಕಂಪನಿಗಳ ಆ್ಯಪ್ ಮೂಲಕವೂ ನಂಬರ್ ಲಿಂಕ್ ಮಾಡಬಹುದು. ಇದಕ್ಕಾಗಿ ಕಂಪನಿ ಆ್ಯಪ್ ನಲ್ಲಿ ಹೊಸ ಟ್ಯಾಬ್ ನೀಡಲಿದೆ ಎಂದು ಮೂಲಗಳು ಹೇಳಿವೆ.

ಇದ್ರ ಜೊತೆಗೆ ಡಿಸೆಂಬರ್ 1ರಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೂಡ ಸುಲಭವಾಗಿದೆ. ಎಲ್ಲ ರೈಲ್ವೆ ಕೇಂದ್ರಗಳಲ್ಲಿ ಭೀಮ್ ಆ್ಯಪ್ ಮೂಲಕ ಪೇಮೆಂಟ್ ತೆಗೆದುಕೊಳ್ಳುವ ವ್ಯವಸ್ಥೆ ಶುರುವಾಗಿದೆ. ಹಾಗಾಗಿ ಟಿಕೆಟ್ ಕೌಂಟರ್ ನಲ್ಲಿ ಕ್ಯೂನಿಂತು ಪರದಾಡುವ ಬದಲು ಸ್ಮಾರ್ಟ್ಫೋನ್ ಮೂಲಕವೇ ಟಿಕೆಟ್ ಬುಕ್ ಮಾಡಿ ಪೇಮೆಂಟ್ ಮಾಡಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...