alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಹಿ ಸುದ್ದಿ: ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ. ಇಳಿಕೆ

ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಸಿಹಿ ಸುದ್ದಿ ನೀಡಿದೆ. ಮನೆ ಬಳಕೆ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಸಲಾಗಿದೆ. ಫ್ರಿಜ್, ಟಿವಿ, ವಾಷಿಂಗ್ ಮಶೀನ್ ಸೇರಿದಂತೆ ಇನ್ನು ಹಲವು ವಸ್ತುಗಳ ಮೇಲಿನ ಜಿ.ಎಸ್.ಟಿ ಕನಿಷ್ಠ 7 ರಿಂದ 10 ರಷ್ಟು ಕಡಿತವಾಗಿದೆ. ಜುಲೈ 21 ರಂದು ನಡೆದ ಜಿ.ಎಸ್.ಟಿ. ಸಭೆಯಲ್ಲಿ ದರವನ್ನು ಪರಿಷ್ಕರಿಸಲಾಗಿದೆ. ಗೃಹೋಪಯೋಗಿ ವಸ್ತುಗಳ ತೆರಿಗೆಯನ್ನು ತಗ್ಗಿಸಲಾಗಿದ್ದು, ಪರಿಷ್ಕೃತ ದರ ಜುಲೈ 27 ರಿಂದ ಜಾರಿಗೆ ಬಂದಿದೆ.

ಗೃಹೋಪಯೋಗಿ ವಸ್ತುಗಳು, ಶೇ.28 ರ ಜಿ.ಎಸ್.ಟಿ. ಶ್ರೇಣಿಯಲ್ಲಿದ್ದು, ತೆರಿಗೆ ಇಳಿಕೆ ಆಗಿದೆ. ಶೇ. 28 ರ ಶ್ರೇಣಿಯಲ್ಲಿ 35 ವಸ್ತುಗಳು ಇದ್ದು, ತಂಬಾಕು, ಐಶಾರಾಮಿ ಉತ್ಪನ್ನಗಳನ್ನು ಮಾತ್ರ ಈ ಶ್ರೇಣಿಯಲ್ಲಿ ಉಳಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ತೆರಿಗೆ ಆದಾಯ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ವಿಶ್ವಾಸವಿದ್ದು, ಶೇ. 28 ರ ಸರಕುಗಳ ತೆರಿಗೆ ಇಳಿಮುಖವಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಎಲೆಕ್ಟ್ರಾನಿಕ್ಸ್‌ ವಲಯದ ಪ್ರಮುಖ ಕಂಪನಿಯಾದ ಸ್ಯಾಮ್‌ಸಂಗ್‌, ಟಿ.ವಿ, ಫ್ರಿಡ್ಜ್‌, ವಾಷಿಂಗ್‌ ಮಶೀನ್‌ ದರಗಳನ್ನು ಶೇ.8ರಷ್ಟು ಇಳಿಕೆ ಮಾಡಿದೆ. ಎಲ್ ಜಿ, ಕಂಪನಿ ಸಹ ವಾಷಿಂಗ್ ಮಶೀನ್, ವಾಕ್ಯೂಮ್ ಕ್ಲೀನರ್ ದರ ಇಳಿಸಿದೆ. ನಿನ್ನೆಯಿಂದಲೇ ಪರಿಷ್ಕೃತ ದರದಲ್ಲಿ ಮಾರಾಟ ಆರಂಭವಾಗಿದ್ದು, ಗೃಹೋಪಯೋಗಿ ವಸ್ತುಗಳು ಶೇ.8-10 ರಷ್ಟು ಅಗ್ಗವಾಗಿವೆ. ಕಡಿತವಾದ ಶೇ. 10ರ ತೆರಿಗೆಯ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ನೀಡುತ್ತಿವೆ.

ಯಾವ ಯಾವ ವಸ್ತುಗಳ ಬೆಲೆ ಇಳಿಕೆ…?

27 ಇಂಚ್ ಟಿವಿ, ವಾಷಿಂಗ್ ಮಶೀನ್, ಫುಟ್ ವೇರ್, ಸ್ಯಾನಿಟರಿ ನ್ಯಾಪ್ ಕಿನ್, ಫ್ರಿಡ್ಜ್, ಮಿಕ್ಸರ್ ಗ್ರೈಂಡರ್, ಐರನ್ ಬಾಕ್ಸ್, ಕಾಫಿ ಮೇಕರ್, ಟೋಸ್ಟ್ ಮೇಕರ್, ವಾಕ್ಯೂಮ್ ಕ್ಲೀನರ್ ಗಳನ್ನು ಶೇಕಡಾ 18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...