alex Certify
ಕನ್ನಡ ದುನಿಯಾ       Mobile App
       

Kannada Duniya

ಮಾ.31ರೊಳಗೆ ಹೊಸ ಕಾರು ಖರೀದಿಸಿದ್ರೆ ಸಿಗುತ್ತೆ ಭರ್ಜರಿ ರಿಯಾಯಿತಿ

ಹೊಸ ಕಾರು ಖರೀದಿಸುವ ಅಥವಾ ಕಾರು ವಿನಿಮಯ ಮಾಡುವ ಯೋಚನೆಯಲ್ಲಿದ್ದರೆ ಮಾರ್ಚ್ 31ರೊಳಗೆ ಮಾಡಿ. ಯಾಕೆಂದ್ರೆ ದೊಡ್ಡ ದೊಡ್ಡ ಕಾರು ಕಂಪನಿಗಳು ಭರ್ಜರಿ ಆಫರ್ಸ್ ನೀಡ್ತಿವೆ. ಕೆಲ ಕಾರು ಕಂಪನಿಗಳು 1 ಲಕ್ಷದವರೆಗೆ ರಿಯಾಯಿತಿ ನೀಡ್ತಿದ್ದರೆ ಮತ್ತೆ ಕೆಲ ಕಂಪನಿಗಳು ಉಚಿತ ವಿಮೆ ಮಾಡಿಸುವ ಭರವಸೆ ನೀಡಿವೆ.

ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹೋಂಡಾ, ಫೋರ್ಡ್, ಮಹೀಂದ್ರ ಎಂಡ್ ಮಹೀಂದ್ರ ಸೇರಿದಂತೆ ಅನೇಕ ಕಂಪನಿಗಳು ಇಂಥ ಆಫರ್ ನೀಡ್ತಿವೆ. ದೇಶದ ಬಹುದೊಡ್ಡ ಕಾರು ಕಂಪನಿ ಮಾರುತಿ ಸುಜುಕಿ ಆಲ್ಟೋ 800 ಮೇಲೆ 60 ಸಾವಿರಕ್ಕಿಂತಲೂ ಹೆಚ್ಚು ರಿಯಾಯಿತಿ ನೀಡ್ತಿದೆ. ಇದ್ರಲ್ಲಿ 30 ಸಾವಿರ ರೂಪಾಯಿ ವಿನಿಮಯ ಮೊತ್ತವೂ ಸೇರಿದೆ.

ಆಲ್ಟೊ 10 ಮೇಲೆ 70 ಸಾವಿರ, ಸೆಲೋರಿಯಾ ಮೇಲೆ 95 ಸಾವಿರ ಸೇರಿದಂತೆ ತನ್ನ ಎಲ್ಲ ಕಾರುಗಳ ಮೇಲೆ ರಿಯಾಯಿತಿ ನೀಡ್ತಿದೆ.

ಟಾಟಾ ಮೋಟರ್ಸ್ ತನ್ನ ಕೆಲ ಕಾರುಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಉಚಿತವಾಗಿ ವಿಮೆ ಮಾಡಿಸುವ ಭರವಸೆ ನೀಡಿದೆ. ಟೊಯೋಟಾ ಕೂಡ ಆಫರ್ ನೀಡೋದ್ರಲ್ಲಿ ಹಿಂದೆ ಬಿದ್ದಿಲ್ಲ. ಈ ಕಂಪನಿ ತನ್ನ ಕಾರುಗಳ ಮೇಲೆ 40 ಸಾವಿರ ರೂಪಾಯಿಯವರೆಗೆ ರಿಯಾಯಿತಿ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...