alex Certify
ಕನ್ನಡ ದುನಿಯಾ       Mobile App
       

Kannada Duniya

ಬರೀ ಮಹಿಳಾ ವ್ಯಾಪಾರಿಗಳಿಂದ ನಡೆಯುತ್ತೆ ಆ ಮಾರುಕಟ್ಟೆ

ima-keithel-market-in-manipur

ಮಣಿಪುರದ ಇಂಫಾಲ್ ನಲ್ಲಿರುವ ಇಮಾ ಮಾರುಕಟ್ಟೆಗೆ ಹೋದ್ರೆ ನೀವು ಆಶ್ಚರ್ಯ ಚಕಿತರಾಗ್ತೀರಾ. ಮಾರುಕಟ್ಟೆಯ ಎಲ್ಲ ಅಂಗಡಿಗಳಲ್ಲೂ ಮಹಿಳೆಯರೇ ಕಾಣಸಿಗ್ತಾರೆ. ಕೇವಲ ಮಹಿಳಾ ವ್ಯಾಪಾರಿಗಳನ್ನು ಹೊಂದಿರುವ ವಿಶ್ವದ ಒಂದೇ ಒಂದು ಮಾರುಕಟ್ಟೆ ಇದಾಗಿದೆ.

ಅಮ್ಮನ ಮಾರುಕಟ್ಟೆ ಎಂಬುದು ಇಮಾ ಮಾರುಕಟ್ಟೆಯ ಅರ್ಥ. ಈ ಮಾರುಕಟ್ಟೆಯಲ್ಲಿ 4 ಸಾವಿರ ಮಹಿಳೆಯರು ಕೆಲಸ ಮಾಡ್ತಾರೆ. ಇಲ್ಲಿ ಆಹಾರ ಪದಾರ್ಥಗಳಿಂದ ಹಿಡಿದು ಎಲ್ಲ ವಸ್ತುಗಳು ಸಿಗುತ್ವೆ.

ಮೊದಲು ಟೆಂಟ್ ಕಟ್ಟಿಕೊಂಡು ವ್ಯಾಪಾರ ಮಾಡ್ತಾ ಇದ್ದರು. ಈಗ ಅಲ್ಲಿನ ಸರ್ಕಾರ ಕಟ್ಟಡವನ್ನು ಕಟ್ಟಿಸಿಕೊಟ್ಟಿದೆ. ಆದ್ರೆ ಕಳಪೆ ವಸ್ತುಗಳನ್ನು ಬಳಸಿ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮಹಿಳಾ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರು.

1786 ರಲ್ಲಿಯೇ ಈ ಮಾರುಕಟ್ಟೆ ಆರಂಭವಾಗಿದೆ ಎಂಬ ಉಲ್ಲೇಖವಿದೆ. ಮಣಿಪುರದ ಪುರುಷರೆಲ್ಲ ಬರ್ಮಾ ಹಾಗೂ ಚೀನಾ ಜೊತೆ ಯುದ್ಧ ನಡೆಸುವುದರಲ್ಲಿ ನಿರತರಾಗಿರುತ್ತಿದ್ದರು. ಮನೆಯ ಜವಾಬ್ದಾರಿ ನೋಡಿಕೊಳ್ಳುವುದು ಮಹಿಳೆಯರ ಹೆಗಲಿಗೇರಿತ್ತು. ಆಗ ಮಹಿಳೆಯರಿಗಾಗಿ ಈ ಮಾರುಕಟ್ಟೆ ಜನ್ಮ ತಳೆಯಿತಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...