alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಹಣ ಡ್ರಾ ಮಾಡಿಕೊಳ್ಳೋದಕ್ಕಂತಾನೇ ಎಟಿಎಂ ಗಳಿವೆ. ಆದ್ರೆ ಎಟಿಎಂ ಗಳಲ್ಲಿ ಅಗುವಂತಾ ಕೆಲವು ಯಡವಟ್ಟುಗಳಿಂದಾಗಿ ಗ್ರಾಹಕರು ಪರದಾಡುವಂತಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಮೂಲದ ಚಂದ್ರಕಲಾ ಸರ್ಕಾರಿ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿಕ್ಕಬಳ್ಳಾಪುರದ ಬಿಬಿ ರೋಡ್ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಅವರು ಎಸ್.ಬಿ. ಅಕೌಂಟ್ ಹೊಂದಿದ್ದರು.

2014ರಲ್ಲಿ ಅವರು ಚೋಳನಾಯಕನಹಳ್ಳಿಯ ಎಟಿಎಂ ಒಂದರಲ್ಲಿ 25,000 ರೂಪಾಯಿ ಹಣ ಡ್ರಾ ಮಾಡಿಕೊಳ್ಳೋದಕ್ಕೆ ಕಾರ್ಡ್ ಸ್ವೈಪ್ ಮಾಡಿದ್ರು. ಆದ್ರೆ ಎಟಿಎಂ ಹಣ ಇಲ್ಲ ಅಂತ ತೋರಿಸಿದ್ರೆ ಕೈಗೆ ಬಂದ ಸ್ಟೇಟ್ಮೆಂಟ್ ಮಾತ್ರ ಹಣ ಡ್ರಾ ಆಗಿದೆ ಅಂತ ತೋರಿಸಿತ್ತು.

ಈ ಬಗ್ಗೆ ಚಂದ್ರಕಲಾ ಬ್ಯಾಂಕ್ ನ ಬ್ರ್ಯಾಂಚ್ ಮ್ಯಾನೇಜರ್ ಒಬ್ಬರನ್ನು ಸಂಪರ್ಕಿಸಿ ತಮಗಾದ ಅನ್ಯಾಯ ವಿವರಿಸಿದ್ರು. 45 ದಿನಗಳ ಪ್ರಕ್ರಿಯೆ ಮುಗಿದ ಬಳಿಕ ಹಣ ಅವರ ಖಾತೆಗೆ ವಾಪಸ್ಸು ಬರೋದಾಗಿ ಹೇಳಿ ಬ್ಯಾಂಕ್ ಅಧಿಕಾರಿಗಳು ಚಂದ್ರಕಲಾ ಅವರನ್ನ ವಾಪಸ್ಸು ಕಳಿಸಿದ್ರು. ಆನಂತರ ಹಣ ಅವರಿಗೆ ವಾಪಸ್ಸು ಬರಲಿಲ್ಲ. ಈ ಬಗ್ಗೆ ಶಿವಾಜಿನಗರದಲ್ಲಿರುವ ಎಸ್.ಬಿ.ಐ. ಪ್ರಧಾನ ಶಾಖೆಯ ಎಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ.

ಕೊನೆಗೆ ಚಂದ್ರಕಲಾ ಕಾನೂನು ಹಾದಿ ಹಿಡಿದರು. ದಾವೆ ಹೂಡಿದರು. ನಾಲ್ಕು ವರ್ಷಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆದು ಕೊನೆಗೂ ಕೋರ್ಟ್ ಬ್ಯಾಂಕ್ ನ ತಪ್ಪನ್ನು ಎತ್ತಿ ತೋರಿಸಿದೆ. ಅಷ್ಟೇ ಅಲ್ಲ ಚಂದ್ರಕಲಾಗೆ ಬರಬೇಕಿದ್ದ 25,000 ದ ಜೊತೆಗೆ 10,000 ಕಾನೂನು ವೆಚ್ಚವನ್ನು ಬ್ಯಾಂಕ್ ವಾಪಸ್ಸು ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...