alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ಕಾರಣಕ್ಕೆ ಪ್ಲೇ ಸ್ಟೋರ್ ನಿಂದ ಹೊರಬಿತ್ತು ಪತಂಜಲಿ Kimbho ಆಪ್

ಸರ್ಕಾರಿ ಟೆಲಿಕಾಂ ಕಂಪನಿ ಬಿ ಎಸ್ ಎನ್ ಎಲ್ ಜೊತೆ ಸೇರಿ ಪತಂಜಲಿ ಸಿಮ್ ಕಾರ್ಡ್ ಬಿಡುಗಡೆ ಮಾಡಿದೆ. ಇದ್ರ ಬೆನ್ನಲ್ಲೇ ಪತಂಜಲಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿಯಾಗಿದೆ. ಗುರುವಾರ ಮೆಸ್ಸೇಜಿಂಗ್ ಆ್ಯಪ್ Kimbho ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿತ್ತು. ಆದ್ರೆ ಕೆಲವೇ ಗಂಟೆಯಲ್ಲಿ ಗೂಗಲ್ ಪ್ಲೇನಿಂದ ಆ್ಯಪನ್ನು ತೆಗೆದು ಹಾಕಲಾಗಿದೆ.

ಗೂಗಲ್ ಪ್ಲೇ ಸ್ಟೋರ್ ನಿಂದ ಆ್ಯಪ್ ತೆಗೆದು ಹಾಕಲು ಮುಖ್ಯ ಕಾರಣ ಪಾಕಿಸ್ತಾನಿ ನಟಿ ಮಾವ್ರಾ ಹೊಕೆನ್.  Kimbho ಆ್ಯಪ್ ನಲ್ಲಿ ಪಾಕಿಸ್ತಾನಿ ನಟಿ ಫೋಟೋ ಇದೆ. ಆ್ಯಪ್ ನೋಡ್ತಿದ್ದಂತೆ ಟ್ವೀಟರ್ ಟ್ರೋಲ್ ಶುರುವಾಗಿದೆ. ಕೆಲವೇ ಗಂಟೆಯಲ್ಲಿ ಪತಂಜಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಆ್ಯಪ್ ತೆಗೆದು ಹಾಕಿದೆ. ಆ್ಯಪ್ ನಲ್ಲಿ ನಂಬರ್ ಸಿಗ್ತಿಲ್ಲ ಎಂಬ ದೂರೂ ಕೆಲವರಿಂದ ಕೇಳಿ ಬಂದಿದೆ.

ತಾಂತ್ರಿಕ ದೋಷಗಳನ್ನು ಸರಿಪಡಿಸಿ ಪಾಕಿಸ್ತಾನಿ ನಟಿ ಫೋಟೋ ತೆಗೆದು ಹಾಕಿ ಶೀಘ್ರದಲ್ಲಿಯೇ ಪತಂಜಲಿ ಆ್ಯಪನ್ನು ಮತ್ತೆ ಬಿಡಲಿದೆ. ಆ್ಯಪ್ ತುಂಬಾ ಸುರಕ್ಷಿತವಾಗಿದ್ದು, ವಾಟ್ಸಾಪ್ ಗೆ ಇದು ಟಕ್ಕರ್ ನೀಡಲಿದೆ ಎಂದು ಪತಂಜಲಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...