alex Certify
ಕನ್ನಡ ದುನಿಯಾ       Mobile App
       

Kannada Duniya

ಸಿರಿವಂತ ಸಹೋದರರ ನಡುವಿನ ಆಸ್ತಿ ಅಂತರ 40 ಬಿಲಿಯನ್ ಡಾಲರ್

ಭಾರತದ ಅತಿ ಸಿರಿವಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ, ಚೀನಾದ ಜಾಕ್ ಮಾ ಅವರನ್ನೂ ಈಗ ಹಿಂದಿಕ್ಕಿದ್ದು, ಏಷ್ಯಾದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇತ್ತ ಅವರ ಸಹೋದರ ಅನಿಲ್ ಅಂಬಾನಿಯವರ ಆಸ್ತಿ ದಿನೇ ದಿನೇ ಕರಗುತ್ತಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಮೂಲಗಳ ಪ್ರಕಾರ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿಯವರ ಆಸ್ತಿ ಮೌಲ್ಯದಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎನ್ನಲಾಗಿದ್ದು, ಅನಿಲ್ ಅಂಬಾನಿಯವರ ಅನೇಕ ಕಂಪನಿಗಳು ನಷ್ಟದಲ್ಲಿ ನಡೆಯುತ್ತಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮುಕೇಶ್ ಅಂಬಾನಿಯವರ ಕಂಪನಿಗಳು ಭಾರೀ ಲಾಭದಲ್ಲಿ ನಡೆಯುತ್ತಿದ್ದು, ಅವರ ಆಸ್ತಿಯಲ್ಲಿ ಏರಿಕೆಯಾಗುತ್ತಲೇ ಸಾಗುತ್ತಿದೆ.

ಧೀರೂಭಾಯಿ ಅಂಬಾನಿ ಅವರ ನಿಧನದ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ನಡುವೆ ಆಸ್ತಿ ಹಂಚಿಕೆ ಕುರಿತು ದೊಡ್ಡ ಸಂಘರ್ಷವೇ ನಡೆದಿತ್ತು. ಧೀರೂಭಾಯಿ ಅಂಬಾನಿ ಯಾವುದೇ ವಿಲ್ ಬರೆಯದೆ ಇದ್ದದ್ದು ಇದಕ್ಕೆ ಕಾರಣವಾಗಿತ್ತು.

ಬಳಿಕ ಧೀರೂಭಾಯಿ ಅಂಬಾನಿ ಅವರ ಪತ್ನಿ ಕೋಕಿಲಾ ಬೆನ್ ಮಧ್ಯ ಪ್ರವೇಶಿಸಿದ್ದು, ಮಕ್ಕಳಿಬ್ಬರಿಗೂ ಆಸ್ತಿ ಹಂಚಿಕೆ ಮಾಡಿ ಕೊಟ್ಟಿದ್ದರು. ಇದರ ನಂತರ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಹೊಸ ಉದ್ದಿಮೆಗಳಲ್ಲೂ ಹೂಡಿಕೆ ಮಾಡಿದ್ದು, ಇದರಲ್ಲಿ ಮುಕೇಶ್ ಅಂಬಾನಿ ಯಶಸ್ವಿಯಾದರೆ ಅನಿಲ್ ಅಂಬಾನಿ ಸಾಲದ ಹೊಡೆತಕ್ಕೆ ಸಿಲುಕಿದ್ದಾರೆ. ಸಹೋದರರಿಬ್ಬರ ನಡುವೆ 40 ಬಿಲಿಯನ್ ಡಾಲರ್ ನಷ್ಟು ಆಸ್ತಿಯಲ್ಲಿ ಅಂತರವಿದ್ದು, ಮುಕೇಶ್ ಅಂಬಾನಿ, ಅನಿಲ್ ಅಂಬಾನಿಗಿಂತಲೂ ಬಹು ಮುಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...