alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ನೀವೇನಾದ್ರು ಹೊಸ ಹೊಸ ಟಿವಿಯನ್ನು ಖರೀದಿಸಬೇಕೆಂದು ಬಯಸಿದ್ದರೆ ಜಾಸ್ತಿ ಹಣ ಜೋಡಿಸಿಕೊಳ್ಳಿ. ಸದ್ಯದಲ್ಲೇ ಟಿವಿ ಸೆಟ್ ದರ ಶೇ. 7 ರಷ್ಟು ಏರಿಕೆಯಾಗಲಿದೆ.

ಮೇಕ್ ಇನ್ ಇಂಡಿಯಾ ಎಫೆಕ್ಟ್ ನಿಂದಾಗಿ ಟಿವಿ ಪ್ಯಾನೆಲ್ ಗಳಿಗೆ ಸೀಮಾ ಸುಂಕ ಶೇ. 7.5 ರಿಂದ ಶೇ. 15 ಕ್ಕೆ ಏರಿಕೆ ಮಾಡಲಾಗಿದೆ. ಎಲ್.ಸಿ.ಡಿ., ಎಲ್.ಇ.ಡಿ., ಓ.ಎಲ್.ಇ.ಡಿ. ಟಿವಿಗಳ ಕೆಲವು ಬಿಡಿಭಾಗಗಳ ಮೇಲಿನ ಸೀಮಾ ಸುಂಕವನ್ನು ಕೇಂದ್ರ ಸರ್ಕಾರ ಶೇ 15 ಕ್ಕೆ ಏರಿಕೆ ಮಾಡಿದೆ.

ದೇಶೀಯವಾಗಿ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಸೀಮಾ ಸುಂಕವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಇದರ ಪರಿಣಾಮ ಸ್ಯಾಮ್ ಸಂಗ್, ಎಲ್.ಜಿ., ಪ್ಯಾನಾಸೊನಿಕ್ ಮೊದಲಾದ ಕಂಪನಿಗಳ ಟಿವಿ ಸೆಟ್ ಗಳ ದರ ಶೇ 7 ರ ವರೆಗೂ ಏರಿಕೆಯಾಗಲಿದೆ.

ಇದರಿಂದಾಗಿ ಟಿವಿ ಮಾರಾಟದ ಮೇಲೆ ಪರಿಣಾಮ ಬೀರಲಿರುವುದರಿಂದ ಸೀಮಾ ಸುಂಕವನ್ನು ವಾಪಸ್ ಪಡೆಯಲು ಎಲೆಕ್ಟ್ರಾನಿಕ್ಸ್ ಅಂಡ್ ಅಪ್ಲಿಯನ್ಸರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...