alex Certify
ಕನ್ನಡ ದುನಿಯಾ       Mobile App
       

Kannada Duniya

60 ರೂ. ಪ್ಲಾನ್ ನೊಂದಿಗೆ 500 ರೂ.ಗೆ ಬರಲಿದೆ ಸ್ಮಾರ್ಟ್ಫೋನ್

ರಿಲಾಯನ್ಸ್ ಜಿಯೋ 4ಜಿ ಸ್ಮಾರ್ಟ್ಫೋನ್ ಬಿಡುಗಡೆಯಾದ ನಂತ್ರ ಮಾರುಕಟ್ಟೆಗೆ ಅನೇಕ ಅಗ್ಗದ ಸ್ಮಾರ್ಟ್ಫೋನ್ ಗಳು ಲಗ್ಗೆಯಿಟ್ಟಿವೆ. 1,000 ರೂಪಾಯಿ ವೆಚ್ಛದ 4ಜಿ ಫೋನ್ ಕೂಡ ಮಾರುಕಟ್ಟೆ ಪ್ರವೇಶ ಮಾಡಿದೆ. ಈಗ ಟೆಲಿಕಾಂ ಕಂಪನಿಗಳು ಅಗ್ಗದ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ತಯಾರಿಯಲ್ಲಿವೆ.

ಮೂಲಗಳ ಪ್ರಕಾರ ಏರ್ಟೆಲ್, ವೋಡಾಫೋನ್ ಹಾಗೂ ಐಡಿಯಾ 500 ರೂಪಾಯಿ 4ಜಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ತಯಾರಿಯಲ್ಲಿದೆ. 60-70 ರೂಪಾಯಿ ತಿಂಗಳ ಯೋಜನೆ ಜೊತೆ ಈ ಫೋನ್ ಬಿಡುಗಡೆಯಾಗಲಿದೆ ಎನ್ನಲಾಗ್ತಿದೆ. ಈ ಪ್ಲಾನ್ ನಲ್ಲಿ ಕಾಲಿಂಗ್ ಜೊತೆ ಡೇಟಾ ಕೂಡ ಸಿಗಲಿದೆ.

ಅಗ್ಗದ ಸ್ಮಾರ್ಟ್ಫೋನ್ ಜೊತೆ ಜಿಯೋ ಅಗ್ಗದ ಪ್ಲಾನ್ ನೀಡ್ತಿದೆ. ಒಂದು ವೇಳೆ ಏರ್ಟೆಲ್, ಐಡಿಯಾ, ವೋಡಾಫೋನ್ 500 ರೂ.ಬೆಲೆಯ ಸ್ಮಾರ್ಟ್ಫೋನ್ ಜೊತೆ ಅಗ್ಗದ ಪ್ಲಾನ್ ನೀಡಿದಲ್ಲಿ ಜಿಯೋಕ್ಕೆ ಹೊಡೆತ ಬೀಳಲಿದೆ. ಈಗಾಗಲೇ ಈ ಮೂರು ಕಂಪನಿಗಳು ಹ್ಯಾಂಡ್ಸೆಟ್ ತಯಾರಿಕಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಅಗ್ಗದ ಫೋನ್ ಮಾರುಕಟ್ಟೆಗೆ ತಂದಿವೆ. ಆದ್ರೆ ಜಿಯೋದಷ್ಟು ಸೌಲಭ್ಯ ಈ ಫೋನ್ ನಲ್ಲಿಲ್ಲ. ಹಾಗಾಗಿಯೇ ಜಿಯೋ ಫೋನ್ ಗೆ ಈಗ್ಲೂ ಬೇಡಿಕೆಯಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...