alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ

Paying by card

ನೋಟು ನಿಷೇಧದ ಬಳಿಕ ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಹಣ ಸಿಗದೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಹಾಗಾಗಿ ನಗದು ರಹಿತ ವಹಿವಾಟಿಗೆ ಹೆಚ್ಚು ಆದ್ಯತೆ ನೀಡಬೇಕು ಅನ್ನೋ ಮಾತುಗಳು ಎಲ್ಲೆಡೆ ಕೇಳಿ ಬರ್ತಿವೆ.

ಸರ್ಕಾರ ಕೂಡ ಕ್ಯಾಶ್ ಲೆಸ್ ಎಕಾನಮಿ ನಿರ್ಮಾಣಕ್ಕೆ ಪಣ ತೊಟ್ಟಿರೋದಾಗಿ ಹೇಳಿದೆ. ತೆಲಂಗಾಣದಲ್ಲಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಗ್ರಾಮವೊಂದಿದೆ. ಸಿದ್ದಿಪೇಟ್ ವಿಧಾನಸಭಾ ಕ್ಷೇತ್ರದಲ್ಲಿರುವ ಇಬ್ರಾಹಿಂಪುರ ದಕ್ಷಿಣ ಭಾರದ ಮೊಟ್ಟ ಮೊದಲ ನಗದು ರಹಿತ ಗ್ರಾಮ.

ಇಬ್ರಾಹಿಂಪುರವನ್ನು ನೀರಾವರಿ ಸಚಿವ ಟಿ.ಹರೀಶ್ ರಾವ್ ದತ್ತು ಪಡೆದಿದ್ದಾರೆ. 1200 ಜನಸಂಖ್ಯೆ ಹೊಂದಿರೋ ಈ ಗ್ರಾಮದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿದ್ದಾರೆ, ಎಲ್ಲರಿಗೂ ಡೆಬಿಟ್ ಕಾರ್ಡ್ ವಿತರಿಸಲಾಗಿದೆ. ಎಲ್ಲಾ ಕಡೆ ಸ್ವೈಪಿಂಗ್ ಮಷಿನ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಬ್ರಾಹಿಂಪುರ ದಕ್ಷಿಣ ಭಾರತದ ಮೊದಲ ಕ್ಯಾಶ್ ಲೆಸ್ ಗ್ರಾಮ ಅಂತಾ ತೆಲಂಗಾಣ ಸರ್ಕಾರ ಪ್ರಕಟಿಸಿದೆ. ಸಚಿವ ಟಿ. ಹರೀಶ್ ರಾವ್, ಸಿದ್ದಿಪೇಟ್ ಕ್ಷೇತ್ರದ ಜನಪ್ರತಿನಿಧಿಯಾಗಿದ್ದು ಇಬ್ರಾಹಿಂಪುರವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿರೋದಾಗಿ ತಿಳಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...