alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಬಿಲ್ ನೋಡಿ ದಂಗಾಗಿದ್ದಾನೆ ಈ ಗ್ರಾಹಕ

airtel

ನವದೆಹಲಿಯ ನಿತಿನ್ ಸೇಥಿ ಎಂಬಾತ ಮೊಬೈಲ್ ಬಿಲ್ ನೋಡಿ ಅಕ್ಷರಶಃ ಕಂಗಾಲಾಗಿದ್ದಾನೆ. ಏರ್ಟೆಲ್ ನಿಂದ ಅವನಿಗೆ 1.86 ಲಕ್ಷ ರೂಪಾಯಿ ಬಿಲ್ ಬಂದಿದೆ. ಜೂನ್ 8ರಿಂದ ಜುಲೈ 7ರ ಅವಧಿಯಲ್ಲಿ ತಯಾರಿಸಿರುವ ಬಿಲ್ ಇದು.

ಒಂದು ತಿಂಗಳಲ್ಲಿ ಮೊಬೈಲ್ ನಲ್ಲಿ ಅದೆಷ್ಟು ಗಂಟೆ ಮಾತನಾಡಿದ್ರೂ 1.86 ಲಕ್ಷ ರೂಪಾಯಿ ಬಿಲ್ ಬರೋದು ಅಸಾಧ್ಯ. ಪೋಸ್ಟ್ ಪೇಯ್ಡ್ ಗ್ರಾಹಕನಾಗಿರೋ ನಿತಿನ್ ಸೇಥಿ ಅಷ್ಟೊಂದು ಕರೆಗಳನ್ನು ಮಾಡಿರಲಿಲ್ಲ. ಜೊತೆಗೆ ಡೇಟಾ ಕೂಡ ಬಳಸಿರಲಿಲ್ಲ.

bill

ಆದ್ರೂ ಹೇಗೆ ಲಕ್ಷಗಟ್ಟಲೆ ಬಿಲ್ ಬಂತು ಅನ್ನೋದು ಗೊತ್ತಾಗದೇ ನಿತಿನ್ ಆತಂಕಗೊಂಡಿದ್ದ. ಬಿಲ್ ಜನರೇಟ್ ಮಾಡುವ ಸಂದರ್ಭದಲ್ಲಾದ ತಾಂತ್ರಿಕ ತೊಂದರೆಯಿಂದ ಬಿಲ್ ಮೊತ್ತ 1.86 ಲಕ್ಷ ಎಂದು ನಮೂದಾಗಿದೆ ಅಂತಾ ಹೇಳಲಾಗ್ತಿದೆ.

ಇನ್ನೊಂದು ಮೂಲಗಳ ಪ್ರಕಾರ ಸೇಥಿ, ಕುಟುಂಬದವರೊಂದಿಗೆ ದುಬೈಗೆ ತೆರಳಿದ್ದ. ಆಗ 10 ದಿನಗಳ ರೋಮಿಂಗ್ ಪ್ಯಾಕ್ ಆ್ಯಕ್ಟಿವೇಟ್ ಮಾಡಿಸಿಕೊಂಡಿದ್ದ. ಭಾರತಕ್ಕೆ ಮರಳಿದ ಮೇಲೂ ರೋಮಿಂಗ್ ಡಿ ಆ್ಯಕ್ಟಿವೇಟ್ ಆಗಿರಲಿಲ್ಲ. ಇದರಿಂದ ಬಿಲ್ ಜಾಸ್ತಿಯಾಗಿರೋ ಸಾಧ್ಯತೆಯಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಏರ್ಟೆಲ್ ಅಧಿಕಾರಿಗಳು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...