alex Certify
ಕನ್ನಡ ದುನಿಯಾ       Mobile App
       

Kannada Duniya

ಮುಚ್ಚಲಿದೆ AskMe ಅಂತರ್ಜಾಲ ತಾಣ

AskMe shuts down, lays off 4,000 employeesನವದೆಹಲಿ: AskMe  ಇ-ಕಾಮರ್ಸ್ ಅಂತರ್ಜಾಲ ತಾಣ ನೇಪಥ್ಯಕ್ಕೆ ಸರಿಯಲಿದೆ. ಆರ್ಥಿಕ ಮುಗ್ಗಟ್ಟಿನ ಕಾರಣ AskMe ಜಾಲತಾಣವನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಮಲೇಷಿಯನ್ ಮೂಲದ ಆಸ್ಟ್ರೋ ಹೋಲ್ಡಿಂಗ್ಸ್ ನ ಆನಂದ ಕೃಷ್ಣನ್ AskMe ಡಾಟ್ ಕಾಮ್ ಮತ್ತು AskMe ಬಜಾರ್ ಡಾಟ್ ಕಾಮ್ ಗೆ 150 ಕೋಟಿ ರೂ. ಗಳನ್ನು ಹೂಡಿಕೆ ಮಾಡಿದ್ದರು. ಆದರೆ ಈಗ ಕೃಷ್ಣನ್ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಈ ಕಾರಣದಿಂದಾಗಿ ಕಂಪನಿ ಆರ್ಥಿಕ ಪರಿಸ್ಥಿತಿ ತೀರ ಕೆಳಮಟ್ಟದಲ್ಲಿದೆ.

ಆರ್ಥಿಕ ಪರಿಸ್ಥಿತಿಯ ಹಿನ್ನಲೆಯಲ್ಲಿ ಕಂಪನಿ ಈಗ ಯಾವುದೇ ಹೊಸ ಆರ್ಡರ್ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಕೆಲವರು ರಾಜೀನಾಮೆ ನೀಡಿದ್ದು, 4 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಗುರುಗ್ರಾಮ ಮೂಲದ ಇ ಕಾಮರ್ಸ್ ಅಂತರ್ಜಾಲ ತಾಣ AskMe 2010 ರಲ್ಲಿ ಆರಂಭವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...