alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಪಾವತಿಸದವರ‌‌ ಬೆನ್ನ ಹಿಂದೆ ಬಿದ್ದ ಐಟಿ

ನೋಟ್ ಬ್ಯಾನ್ ನಡೆದು ಎರಡು ವರ್ಷ ಕಳೆಯುತ್ತ ಬಂದಂತೆ, ತೆರಿಗೆ ಪಾವತಿ‌ದಾರರ ಸಂಖ್ಯೆಯೂ ಹೆಚ್ಚಾಗಿದೆಯಂತೆ. ಆದರೆ ಐಟಿ ಇಲಾಖೆ ಸುಮಾರು 80ಸಾವಿರ ತೆರಿಗೆ ವಂಚನೆ ಪ್ರಕರಣಗಳ ಹಿಂದೆ‌ ಬಿದ್ದಿದೆ.

ಈ ಬಗ್ಗೆ ಸ್ವತ ತೆರಿಗೆ ಇಲಾಖೆ ಅಧಿಕಾರಿಗಳೇ ಮಾಹಿತಿ‌ ನೀಡಿದ್ದು, ನೋಟ್ ಬ್ಯಾನ್ ಬಳಿಕ‌ ಬ್ಯಾಂಕ್ ಮೂಲಕವೇ ಹಣಕಾಸು ವ್ಯವಹಾರ ನಡೆಯುತ್ತಿರುವುದರಿಂದ, ಆದಾಯ ತೆರಿಗೆ ಇಲಾಖೆಗೆ ತೆರಿಗೆದಾರರನ್ನು ಗುರುತಿಸುವುದು ಸುಲಭವಾಗಿದೆ. ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 80 ಸಾವಿರ ತೆರಿಗೆ ವಂಚನೆ ಪ್ರಕರಣಗಳ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ‌.

ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ದೇಶದಲ್ಲಿ ನೋಟ್ ಬ್ಯಾನ್ ಆದ ಬಳಿಕ ಡೈರೆಕ್ಟ್ ಟ್ಯಾಕ್ಸ್ ಮೂಲಕ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. ಶೇ. 52ರಷ್ಟು ತೆರಿಗೆ ಹಣ ನೇರ ತೆರಿಗೆಯಿಂದ ಬರುತ್ತಿದ್ದು, ಶೇ.48 ರಷ್ಟು ಆದಾಯ ಇನ್ ಡೈರೆಕ್ಟ್ ಟ್ಯಾಕ್ಸ್ ಮೂಲಕ ಬರುತ್ತಿದೆ. ಇದೊಂದು ಉತ್ತಮ ನಡೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಬಿಡಿಟಿ ಅಧ್ಯಕ್ಷ ಸುಶೀಲ್ ಚಂದ್ರ ಮಾತನಾಡಿ, ಇಲಾಖೆ ಈಗಾಗಲೇ 80 ಲಕ್ಷ ತೆರಿಗೆದಾರರನ್ನು ಗುರುತಿಸಿದೆ. ಆದರೆ ಇವರ್ಯಾರು ತೆರಿಗೆ ಕಟ್ಟಲು ಮುಂದೆ ಬಂದಿಲ್ಲ. ಈಗಾಗಲೇ ಸುಮಾರು 3 ಲಕ್ಷ ಜನರಿಗೆ ನೊಟೀಸ್ ನೀಡಲಾಗಿದ್ದು, ಇದರಲ್ಲಿ 80 ಸಾವಿರ ಜನ ಯಾವುದೇ ರಿಟರ್ನ್ಸ್ ಫೈಲ್ ಮಾಡಿಲ್ಲ. ಆದ್ದರಿಂದ ಈ 80 ಸಾವಿರ ಜನರ ಹಿಂದೆ ಆದಾಯ ತೆರಿಗೆ ಇಲಾಖೆ ಬಿದ್ದಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...