alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಿಂಗ್! ನಾಳೆಯಿಂದ ಟ್ಯಾಕ್ಸಿಗಳಿಗೆ ಹೊಸ ದರ

ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಸಂಚರಿಸುವ ಟ್ಯಾಕ್ಸಿಗಳಿಗೆ ಹೊಸ ದರವನ್ನು ಪರಿಷ್ಕರಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

5 ಲಕ್ಷ ರೂ. ಮೌಲ್ಯದ ಟ್ಯಾಕ್ಸಿಗೆ ಪ್ರತಿ ಕಿಲೋ ಮೀಟರ್ ಗೆ ಕನಿಷ್ಟ 11 ರೂ. ಗರಿಷ್ಠ 12 ರೂ. ದರ ನಿಗದಿ ಮಾಡಲಾಗಿದೆ. 4 ಕಿಲೋ ಮೀಟರ್ ವರೆಗಿನ ಪ್ರಯಾಣಕ್ಕೆ 44 ರೂ. ನಿಗದಿಪಡಿಸಲಾಗಿದೆ.

5 ಲಕ್ಷ ರೂ.ನಿಂದ 10 ಲಕ್ಷ ರೂ. ಮೌಲ್ಯದ ಟ್ಯಾಕ್ಸಿಗಳಿಗೆ ಪ್ರತಿ ಕಿಲೋಮೀಟರ್ ಪ್ರಯಾಣ ದರವನ್ನು ಕನಿಷ್ಟ 12 ರೂ.ನಿಂದ ಗರಿಷ್ಠ 24 ರೂ. ನಿಗದಿಪಡಿಸಲಾಗಿದೆ.

10 ಲಕ್ಷ ರೂ.ನಿಂದ 16 ಲಕ್ಷ ರೂ. ವರೆಗಿನ ಟ್ಯಾಕ್ಸಿಗಳಿಗೆ ಕನಿಷ್ಟ 16 ರೂ.ನಿಂದ ಗರಿಷ್ಠ 34 ರೂ. ನಿಗದಿ ಮಾಡಲಾಗಿದೆ. 4 ಕಿಲೋ ಮೀಟರ್ ವರೆಗೆ ಕನಿಷ್ಟ ದರ 52 ರೂ. ನಿಂದ 68 ರೂ. ದರ ನಿಗದಿ ಮಾಡಲಾಗಿದೆ.

ಟ್ಯಾಕ್ಸಿ ವಾಹನಗಳ ಮೌಲ್ಯವನ್ನು ಆಧರಿಸಿ ದರ ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...