alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಈಗಾಗಲೇ ಅನೇಕ ಕಡೆ ಮದ್ಯವನ್ನು ಸಂಗ್ರಹಿಸಿಡಲಾಗಿದೆ. ಚುನಾವಣೆಯ ವೇಳೆ ಮದ್ಯ ಹೆಚ್ಚು ಖರ್ಚಾಗುತ್ತದೆ. ಇದೆಲ್ಲಾ ಹಳೆ ವಿಷಯವೇ.

ಹೊಸದೇನೆಂದರೆ, ಬಜೆಟ್ ನಲ್ಲಿ ಘೋಷಣೆಯಾಗಿರುವಂತೆ ಏಪ್ರಿಲ್ 1 ರಿಂದ ತೆರಿಗೆ ಜಾಸ್ತಿಯಾಗಲಿದ್ದು, ಮದ್ಯಪಾನ ಪ್ರಿಯರು ದುಬಾರಿ ಬೆಲೆ ತೆರಬೇಕಿದೆ. 2018 -19 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ತೆರಿಗೆ ಏರಿಕೆ ಮಾಡಲಾಗಿದ್ದು, ಏಪ್ರಿಲ್ 1 ರಿಂದ ಶೇ. 8 ರಷ್ಟು ತೆರಿಗೆ ಜಾಸ್ತಿಯಾಗಲಿದೆ.

ಮದ್ಯ ಮಾರಾಟ ದರ ಶೇ. 8 ರಷ್ಟು ಹೆಚ್ಚಳವಾಗಲಿದೆ. ಹೊಸ ದರ ಮುದ್ರಣವಾಗುವತನಕ ಹಳೆಯ ದರಕ್ಕೆ ತೆರಿಗೆ ಸೇರಿಸಿ ಮದ್ಯವನ್ನು ಮಾರಾಟ ಮಾಡಲಾಗುತ್ತದೆ. ಏಪ್ರಿಲ್ 1 ರಿಂದ ಭಾರತೀಯ ಮದ್ಯ, ಬಿಯರ್, ವಿದೇಶಿ ಮದ್ಯ ಸೇರಿ ಎಲ್ಲಾ ರೀತಿಯ ಮದ್ಯದ ಮೇಲೆ ಶೇ. 8 ರಷ್ಟು ತೆರಿಗೆ ಹೆಚ್ಚಾಗಲಿದೆ. ಮದ್ಯಪ್ರಿಯರು ಇನ್ನು ಮೇಲೆ ಹೆಚ್ಚು ಬೆಲೆಯನ್ನು ತೆರಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...