alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಪ್ರಮುಖ ವಾಹನ ತಯಾರಿಕಾ ಕಂಪನಿಯಾಗಿರುವ ಟಾಟಾ ಮೋಟರ್ಸ್ ವಾಹನಗಳನ್ನು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ.

ಟಾಟಾ ಮೋಟರ್ಸ್ ವಾಹನಗಳ ಮಾರಾಟ ಬೆಲೆಯನ್ನು ಹೆಚ್ಚಳ ಮಾಡಲು ಮುಂದಾಗಿದೆ. ಏಪ್ರಿಲ್ 1 ರಿಂದ ಕಾರುಗಳ ಮಾದರಿ ಆಧರಿಸಿ, 60,000 ರೂ.ವರೆಗೆ ದರ ಏರಿಕೆ ಮಾಡಲಾಗುವುದು. ತಯಾರಿಕಾ ವೆಚ್ಚ ಹೆಚ್ಚಳ, ಮಾರುಕಟ್ಟೆ ಪರಿಸ್ಥಿತಿಯಲ್ಲಿನ ಬದಲಾವಣೆ ಮೊದಲಾದ ಕಾರಣಗಳಿಂದ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲಾಗ್ತಿದೆ.

ದೆಹಲಿಯಲ್ಲಿ ಟಾಟಾ ಮೋಟರ್ಸ್ ನ ಜೆನ್ ಎಕ್ಸ್ ನ್ಯಾನೊ ಕಾರಿನ ಆರಂಭಿಕ ಬೆಲೆ 2.28 ಲಕ್ಷ ರೂ. ಇದೆ., ಎಸ್.ಯು.ವಿ. ಹೆಕ್ಸಾ 17.42 ಲಕ್ಷ ರೂ. ಬೆಲೆ ಹೊಂದಿದೆ.

ತಯಾರಿಕಾ ವೆಚ್ಚ ಹೆಚ್ಚಾದ ಕಾರಣ, ಏಪ್ರಿಲ್ 1 ರಿಂದ ಟಾಟಾ ವಾಹನ ಬೆಲೆಯಲ್ಲಿ ಮಾದರಿ ಆಧರಿಸಿ, 60,000 ರೂ. ವರೆಗೆ ಏರಿಕೆ ಮಾಡಲಾಗುವುದು ಎಂದು ಟಾಟಾ ಕಂಪನಿಯ ಕಾರು ತಯಾರಿಕಾ ವಿಭಾಗದ ಅಧ್ಯಕ್ಷರಾದ ಮಯಾಂಕ್ ಪರೇಖ್ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...