alex Certify
ಕನ್ನಡ ದುನಿಯಾ       Mobile App
       

Kannada Duniya

OMG: ಒಂದು ಲೀಟರ್ ಪೆಟ್ರೋಲ್ ಗೆ 100 ಕಿ.ಮೀ ಚಲಿಸಲಿದೆ ಈ ಕಾರು…!

ಕಾರು ಖರೀದಿ ಮಾಡಿದ್ರೆ ಸಾಲಲ್ಲ, ಪ್ರತಿ ದಿನ ಅದ್ರ ಹೊಟ್ಟೆ ತುಂಬಿಸೋದು ಕಷ್ಟ ಎನ್ನುತ್ತಾರೆ ಶ್ರೀಸಾಮಾನ್ಯರು. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ಕಾಣ್ತಿದೆ ನಿಜ. ಆದ್ರೆ ಬೆಲೆ ಮತ್ಯಾವಾಗ ಏರಿಕೆ ಕಾಣುತ್ತೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಪೆಟ್ರೋಲ್-ಡಿಸೇಲ್ ಬೆಲೆಯಿಂದ ಕಂಗೆಟ್ಟವರಿಗೆ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಟಾಟಾ ಖುಷಿ ಸುದ್ದಿಯೊಂದನ್ನ ನೀಡಿದೆ.

ಟಾಟಾ, ಶೀಘ್ರವೇ ಹೊಸ ಕಾರೊಂದನ್ನು ರಸ್ತೆಗೆ ಇಳಿಸಲಿದೆ. ಈ ಕಾರಿನ ವಿಶೇಷವೆಂದ್ರೆ ಕಾರಿಗೆ 1 ಲೀಟರ್ ಪೆಟ್ರೋಲ್ ತುಂಬಿಸಿದ್ರೆ ಸಾಕು, 100 ಕಿಲೋಮೀಟರ್ ಆರಾಮವಾಗಿ ಸಾಗಬಹುದಾಗಿದೆ. ಪೆಟ್ರೋಲ್ ಬೆಲೆ ನೋಡಿ ಕಾರು ಖರೀದಿಗೆ ಮನಸ್ಸು ಮಾಡದೆ ಇರುವವರಿಗೆ ಇದೊಂದು ಸುವರ್ಣಾವಕಾಶ.

ಈ ಕಾರಿಗೆ ಕಂಪನಿ ಮೆಗಾಪಿಕ್ಸೆಲ್ ಎಂದು ಹೆಸರಿಟ್ಟಿದೆ. 82ನೇ ಜಿನೀವಾ ಮೋಟಾರು ವಾಹನ ಪ್ರದರ್ಶನದಲ್ಲಿ ಟಾಟಾ ಈ ಕಾರನ್ನು ಜಗತ್ತಿಗೆ ಪರಿಚಯಿಸಿದೆ. 2019 ರಲ್ಲಿ ಕಾರು ಮಾರುಕಟ್ಟೆಗೆ ಬರುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಇದ್ರ ಬೆಲೆ 1 ಲಕ್ಷದಿಂದ 2 ಲಕ್ಷದೊಳಗಿರಲಿದೆ. ಈ ಕಾರು ನಾಲ್ಕು ಸೀಟ್ ಗಳನ್ನು ಹೊಂದಿರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...