alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಪ್ರಯಾಣ ದರದಲ್ಲಿ ಭಾರೀ ‘ಏರಿಕೆ’…!

ತೈಲ ಕಂಪನಿಗಳು ಪ್ರತಿ ದಿನ ಪೆಟ್ರೋಲ್  ಹಾಗೂ ಡೀಸೆಲ್ ಬೆಲೆಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ನಿಷ್ಕರ್ಷೆ ಮಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಲೇ ಸಾಗಿದೆ.

ಇದರ ಬಿಸಿ ತಮಿಳುನಾಡು ಸಾರಿಗೆ ನಿಗಮಕ್ಕೂ ತಟ್ಟಿದ್ದು, 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಸ್ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ.

ಶೇ.20 ರಿಂದ ಶೇ.54.54 ರಷ್ಟು ಪ್ರಯಾಣ ದರ ಏರಿಕೆಯಾಗಿದ್ದು, ಈ ಹಿಂದೆ ಸಾಧಾರಣ ಬಸ್ ಗಳಲ್ಲಿ ಪ್ರತಿ 10 ಕಿ.ಮೀ. ಗೆ 5 ರೂ. ದರವಿದ್ದು ಈಗ ಅದನ್ನು 6 ರೂ. (ಶೇ. 20)ಗೆ ಏರಿಸಲಾಗಿದೆ. ವೋಲ್ವೊ ಬಸ್ ನಲ್ಲಿ ಪ್ರತಿ 30 ಕಿ.ಮೀ. ಗೆ 33 ರೂ. ಇದ್ದು, ಈ ದರವನ್ನು ಈಗ 51 ರೂ.(ಶೇ. 54.54) ಗೆ ಏರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...