alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನು ನಿದ್ದೆ ಮಾಡಲ್ಲ ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟೋರು!

swiss_q7vjo0r

ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣವಿಟ್ಟು ಆರಾಮಾಗಿದ್ದವರು ಇನ್ಮುಂದೆ ನಿದ್ದೆಗೆಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸ್ವಿಜರ್ಲ್ಯಾಂಡ್ ಬ್ಯಾಂಕ್ ನಲ್ಲಿಟ್ಟಿರುವ ಕಪ್ಪು ಹಣವನ್ನು ವಾಪಸ್ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಎರಡೂ ದೇಶಗಳು ಕಪ್ಪುಹಣದ ಬಗ್ಗೆ ನೇರವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ. ಕಪ್ಪುಹಣದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ-ಸ್ವಿಜರ್ಲ್ಯಾಂಡ್ ಯೋಚಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗ್ತಿದೆ.

ಈ ಒಪ್ಪಂದ ಅನುಷ್ಠಾನಗೊಂಡಲ್ಲಿ ಕಪ್ಪುಹಣದ ಮಾಹಿತಿ ಸ್ವಯಂಚಾಲಿತವಾಗಿ ವಿನಿಮಯವಾಗಲಿದೆ. ಈ ಒಪ್ಪಂದ ಕಪ್ಪು ಹಣದ ವಿರುದ್ಧ ಎರಡೂ ದೇಶಗಳು ಹೋರಾಟ ನಡೆಸಲು ನೆರವಾಗಲಿದೆ.

ಹಿಂದಿನಿಂದಲೂ ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಕೇಂದ್ರ ಸರ್ಕಾರ ಕಪ್ಪುಹಣ ವಾಪಸ್ ತರುವ ನಿಟ್ಟಿನಲ್ಲಿ ಕೆಲಸ ಮಾಡ್ತಿರುವುದಾಗಿ ಹೇಳ್ತಿದೆ. ಈ ಹೊಸ ಒಪ್ಪಂದ ಯಶಸ್ವಿಯಾದಲ್ಲಿ ದೇಶಕ್ಕೆ ಬಹಳಷ್ಟು ಅನುಕೂಲವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...