alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವೈಪಿಂಗ್ ಮಷಿನ್ ಗೆ ಹೆಚ್ಚಾಯ್ತು ಬೇಡಿಕೆ

Modern wireless POS-terminal with battery and GPRS module

500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ, ಹೊಸ 2000 ರೂ. ನೋಟ್ ಚಲಾವಣೆಯಾಗುತ್ತಿವೆ. ಆದರೆ, 2000 ರೂ. ನೋಟಿಗೆ ಚಿಲ್ಲರೆ ಸಮಸ್ಯೆ ಎದುರಾಗಿದೆ. ಇದರಿಂದಾಗಿ ವ್ಯಾಪಾರ ವಹಿವಾಟು ಕುಂಠಿತವಾಗಿದೆ.

ನೋಟ್ ಬ್ಯಾನ್ ಬಳಿಕ ಅನೇಕ ಪರಿಣಾಮ ಉಂಟಾಗಿದ್ದು, ಗ್ರಾಹಕರು ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕೈಯಲ್ಲಿ ಹಣವಿಲ್ಲದ ಕಾರಣ, ಹೆಚ್ಚಿನ ಮಂದಿ ಪೇಟೆ ಕಡೆ ಮುಖ ಮಾಡುತ್ತಿಲ್ಲ. ನಗದು ವ್ಯವಹಾರಕ್ಕಿಂತ ನಗದು ರಹಿತ ವ್ಯವಹಾರ ಹೆಚ್ಚಾಗುತ್ತಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹೊಂದಿದವರಿಗೆ ಅಂತಹ ಸಮಸ್ಯೆಯೇನು ಆಗಿಲ್ಲ. ಆದರೆ, ಎಲ್ಲಾ ವರ್ತಕರು, ವ್ಯವಹಾರಸ್ಥರ ಬಳಿ ಸ್ವೈಪಿಂಗ್ ಮಷಿನ್ ಗಳಿಲ್ಲ.

ಸದ್ಯಕ್ಕಂತೂ ನೋಟ್ ಬ್ಯಾನ್, ಚಿಲ್ಲರೆ ಸಮಸ್ಯೆಗೆ ಪರಿಹಾರದ ರೂಪದಲ್ಲಿ ಸ್ವೈಪಿಂಗ್ ಮಷಿನ್ ಕಂಡು ಬಂದಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ವ್ಯಾಪಾರಸ್ಥರು ಸ್ವೈಪಿಂಗ್ ಮಷಿನ್ ಖರೀದಿಗೆ ಮುಂದಾಗಿದ್ದಾರೆ. ಖಾಸಗಿ ಕಂಪನಿಗಳು ಸ್ವೈಪಿಂಗ್ ಮಷಿನ್ ಪೂರೈಕೆ ಮಾಡುತ್ತವೆ. ಬ್ಯಾಂಕ್ ಗಳಿಂದ ಅನುಮತಿ ಪಡೆಯಬೇಕಿರುವುದರಿಂದ ವ್ಯಾಪಾರಸ್ಥರು ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ನಗದು ರಹಿತ ವ್ಯವಹಾರ ಹೆಚ್ಚಾಗಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...