alex Certify
ಕನ್ನಡ ದುನಿಯಾ       Mobile App
       

Kannada Duniya

ಜಿ.ಎಸ್.ಟಿ. ಅಡಿ ಬರುತ್ತಾ ಪೆಟ್ರೋಲ್-ಡಿಸೇಲ್? ಸುಶೀಲ್ ಮೋದಿಯಿಂದ ಬಂತು ದೊಡ್ಡ ಹೇಳಿಕೆ

ಬಿಹಾರದ ಉಪಮುಖ್ಯಮಂತ್ರಿ ಹಾಗೂ ಜಿ.ಎಸ್.ಟಿ. ಪರಿಷತ್ ಸದಸ್ಯ ಸುಶೀಲ್ ಮೋದಿ, ಪೆಟ್ರೋಲ್-ಡಿಸೇಲ್ ಜಿ.ಎಸ್.ಟಿ. ವಿಚಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್.ಟಿ. ಅಡಿ ತರುವ ಬಗ್ಗೆ ಕೌನ್ಸಿಲ್ ನಲ್ಲಿ ಚರ್ಚೆ ನಡೆಸುವುದಾಗಿ ಅವ್ರು ಹೇಳಿದ್ದಾರೆ.

ಮಾಸಿಕ ಆದಾಯದ ಗುರಿ ಒಂದು ಲಕ್ಷ ಕೋಟಿಯಿದ್ದು, ಆರಂಭದಲ್ಲಿ ಇದು ಕಡಿಮೆ ಬರುವ ಸಾಧ್ಯತೆಯಿದೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ. ಪೆಟ್ರೋಲಿಯಂ ಉತ್ಪನ್ನ, ಅಂಚೆ ಚೀಟಿ ಹಾಗೂ ವಿದ್ಯುತ್ ಬಿಲ್ ಜಿ.ಎಸ್.ಟಿ. ಅಡಿ ಬಂದಾಗ ಹೊಸ ತೆರಿಗೆ ಯೋಜನೆ ಸಂಪೂರ್ಣ ಜಾರಿಗೆ ಬರಲಿದೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ.

ಸಾಮಾನ್ಯ ಜನರಿಗೆ ನೆಮ್ಮದಿ ನೀಡಲು ಹಿಂದಿನ ಸಭೆಯಲ್ಲಿ 50ಕ್ಕಿಂತಲೂ ಹೆಚ್ಚು ವಸ್ತುಗಳ ಜಿ.ಎಸ್.ಟಿ. ದರ ಇಳಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಇಳಿಕೆಗೆ ಯಾವುದೇ ರಾಜ್ಯ ಬಯಸುವುದಿಲ್ಲ. ರಾಜ್ಯದ ಶೇಕಡಾ 40ರಷ್ಟು ಆದಾಯ ಇದ್ರಿಂದ ಬರುತ್ತದೆ. ಜಿ.ಎಸ್.ಟಿ. ಅಡಿ ಪೆಟ್ರೋಲಿಯಂ ಉತ್ಪನ್ನ ಬಂದ್ರೂ ರಾಜ್ಯಗಳು ಪ್ರತ್ಯೇಕ ತೆರಿಗೆ ವಸೂಲಿ ಮಾಡಲಿವೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...