alex Certify
ಕನ್ನಡ ದುನಿಯಾ       Mobile App
       

Kannada Duniya

24 ಕೋಟಿ ಬೆಲೆಯ ಈ ಉಂಗುರದಲ್ಲಿದೆ 6690 ವಜ್ರ

ವಜ್ರ ನಗರಿ ಸೂರತ್ ಮತ್ತೊಮ್ಮೆ ಗಿನ್ನಿಸ್ ಬುಕ್ ಸೇರಿದೆ. ವಜ್ರ ವ್ಯಾಪಾರಿಯೊಬ್ಬರ ವಜ್ರದ ಉಂಗುರ ಗಿನ್ನಿಸ್ ಬುಕ್ ನಲ್ಲಿ ಸ್ಥಾನ ಪಡೆದಿದೆ. ವಜ್ರದ ವ್ಯಾಪಾರಿ ತಯಾರಿಸಿದ ಉಂಗುರದಲ್ಲಿ 6690 ವಜ್ರಗಳಿವೆ. ಇದ್ರ ಬೆಲೆ ಸರಿ ಸುಮಾರು 24 ಕೋಟಿ ರೂಪಾಯಿಯಾಗಿದೆ.

ಮೇಕ್ ಇನ್ ಇಂಡಿಯಾಕ್ಕೆ ಜಾಗತಿಕ ಮನ್ನಣೆ ಸಿಗುವ ಉದ್ದೇಶದಿಂದ ಈ ಕೆಲಸ ಮಾಡಲಾಗಿದೆ ಎಂದು ವಜ್ರ ವ್ಯಾಪಾರಿ ವಿಶಾಲ್ ಅಗರ್ವಾಲ್ ಹೇಳಿದ್ದಾರೆ. ಇದ್ರ ವಿನ್ಯಾಸವನ್ನು ವಿಶಾಲ್ ಪತ್ನಿ ಖುಷ್ಬು ಅಗರ್ವಾಲ್ ಮಾಡಿದ್ದಾರೆ. ಈ ಉಂಗುರ ತಯಾರಿಸಲು 20 ಕುಶಲಕರ್ಮಿಗಳು ಕೆಲಸ ಮಾಡಿದ್ದಾರೆ.

ವಜ್ರದ ಉಂಗುರಕ್ಕೆ ಕಮಲದ ರೂಪ ನೀಡಲಾಗಿದೆ. ಮೊದಲು ಕಂಪ್ಯೂಟರ್ ನಲ್ಲಿ ಮಾಡೆಲ್ ತಯಾರಿಸಲಾಗಿದೆ. ನಂತ್ರ ರಿಂಗ್ ತಯಾರಿಸಲು ಸಿದ್ಧತೆ ನಡೆಸಲಾಯ್ತು. ಸತತ ಒಂದು ವರ್ಷಗಳ ಪ್ರಯತ್ನದ ನಂತ್ರ ಉಂಗುರ ಸಿದ್ಧವಾಗಿದೆ. 18 ಕ್ಯಾರೆಟ್ ನ ರೋಜ್ ಗೋಲ್ಡ್ ಹಾಗೂ 24 ಶೇಕಡಾ ಮಿಶ್ರಲೋಹವನ್ನು ಬಳಸಲಾಗಿದೆ. ಈ ಉಂಗುರ 6 ತೊಲೆ ಹೊಂದಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...