alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯಿ ಸುಡಲ್ಲ ಕಾಫಿ, ಟೀ- ಸಿಹಿಯಾಗಲಿದೆ ಸಕ್ಕರೆ

gst

ನವದೆಹಲಿ: ಕಾಫಿ, ಟೀ ಇನ್ಮೇಲೆ ಬಾಯಿ ಸುಡಲ್ಲ. ಜುಲೈ 1 ರಿಂದ ಜಿ.ಎಸ್.ಟಿ. ಜಾರಿಯಾಗಲಿದ್ದು, ಇದರ ಅಡಿಯಲ್ಲಿ ಸಕ್ಕರೆ, ಕಾಫಿ, ಟೀ, ಹಾಲಿನ ಪುಡಿ ಮೇಲಿನ ತೆರಿಗೆ ಇಳಿಕೆಯಾಗಲಿದೆ.

ಪ್ರಸ್ತುತ ಸಕ್ಕರೆಯ ಮೇಲೆ ಕೇಂದ್ರ ಸರ್ಕಾರದ ಅಬಕಾರಿ ಸುಂಕ ಪ್ರತಿ ಕ್ವಿಂಟಾಲ್ ಗೆ 71 ರೂ. ಹಾಗೂ 124 ರೂ. ಸೆಸ್ ನೀಡಬೇಕಿದೆ. ಇದರಿಂದಾಗಿ ಸಕ್ಕರೆಯ ಮೇಲೆ ಶೇ. 6 ರಷ್ಟು ತೆರಿಗೆ ಹೊರೆ ದಾಟುತ್ತದೆ. ಇದರೊಂದಿಗೆ ಕೇಂದ್ರ ಮಾರಾಟ ತೆರಿಗೆ, ಅಕ್ಟ್ರಾಯ್ ಮತ್ತು ಎಂಟ್ರಿ ತೆರಿಗೆ ಸೇರಿ ಶೇ. 8 ರಷ್ಟಾಗುತ್ತದೆ.

ಜಿ.ಎಸ್.ಟಿ. ಅಡಿಯಲ್ಲಿ ಸಕ್ಕರೆ ಮೇಲೆ ಕೇವಲ ಶೇ. 5 ರಷ್ಟು ತೆರಿಗೆ ವಿಧಿಸಿರುವುದರಿಂದ ಈಗಿನ ದರಕ್ಕೆ ಹೋಲಿಸಿದಾಗ ಶೇ. 3 ರಷ್ಟು ತೆರಿಗೆ ಕಡಿಮೆಯಾಗಲಿದೆ.

ಟೀ ಮತ್ತು ಕಾಫಿ ತೆರಿಗೆ ಶೇ. 7 ರಷ್ಟಿದ್ದು, ಅದು ಶೇ. 5 ಕ್ಕೆ ಇಳಿಕೆಯಾಗಲಿದೆ. ಹಾಲಿನ ಪುಡಿ ಮೇಲಿನ ತೆರಿಗೆ ಕೂಡ ಶೇ. 7 ರಷ್ಟಿದೆ. ಅದು ಶೇ. 5 ಕ್ಕೆ ಇಳಿಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...