alex Certify
ಕನ್ನಡ ದುನಿಯಾ       Mobile App
       

Kannada Duniya

ಪದವಿಯನ್ನೇ ಪಡೆಯದ ವಿಶ್ವದ ಅತಿ ಸಿರಿವಂತರಿವರು…!

mark-zukerberg-

ಶಿಕ್ಷಣ ಇಂದಿನ ಕಾಲಕ್ಕೆ ಅವಶ್ಯಕ. ಅದರಲ್ಲಿಯೂ ಜ್ಞಾನ ಬೆಳೆಸಿಕೊಳ್ಳಲು ಶಿಕ್ಷಣ ಬೇಕು. ಕಡಿಮೆ ಓದಿದ ಅನೇಕ ಸಾಧಕರು ಇದ್ದಾರೆ. ಪದವಿ ಪಡೆಯದಿದ್ದರೂ ಐಟಿ ವಲಯದಲ್ಲಿ ಶತಕೋಟ್ಯಾಧಿಪತಿಗಳಾಗಿರುವ ಸಾಧಕರ ಕುರಿತಾದ ಮಾಹಿತಿ ಇಲ್ಲಿದೆ.

ಆಪಲ್ ಕಂಪನಿಯ ಸಹಸಂಸ್ಥಾಪಕ ಸ್ಟೀವ್ ಜಾಬ್ ಪದವಿ ಮುಗಿಸಿಲ್ಲ. ಒಂದು ಸೆಮಿಸ್ಟರ್ ಮುಗಿಸಿ ಡ್ರಾಪ್ ಔಟ್ ಆಗಿದ್ದರು. ಅದೇ ರೀತಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ 20ನೇ ವರ್ಷಕ್ಕೆ ಕಾಲೇಜ್ ಬಿಟ್ಟವರು ಅವರ ಬಳಿ ಬರೋಬ್ಬರಿ 42 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಇನ್ನು ವಾಟ್ಸಾಪ್ ಸಿಇಓ ಮತ್ತು ಸಹ ಸಂಸ್ಥಾಪಕರಾಗಿದ್ದ ಜಿಯೋನ್ ಕಾಮ್, ಅರ್ಧಕ್ಕೆ ಶಾಲೆಯನ್ನು ಬಿಟ್ಟಿದ್ದರು.

ಟ್ವಿಟರ್ ಸಹಸಂಸ್ಥಾಪಕ ಇವಾನ್ ವಿಲಿಯಮ್ಸ್ 20ನೇ ವರ್ಷಕ್ಕೆ ಪದವಿ ಬಿಟ್ಟು, ಕೆಲಸ ಮಾಡಲು ಆರಂಭಿಸಿದ್ದರು. ಡೆಲ್ ಕಂಪನಿಯ ಸಂಸ್ಥಾಪಕ ಮೈಕೆಲ್ ಡೆಲ್, 19ನೇ ವರ್ಷಕ್ಕೆ ಶಿಕ್ಷಣದಿಂದ ದೂರವಾಗಿದ್ದರು. 2012ರಲ್ಲಿ ಫೋರ್ಬ್ಸ್ ಮ್ಯಾಗ್ ಜಿನ್ ನಲ್ಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 41ನೇಯವರಾಗಿದ್ದರು.

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗರಾಗಿರುವ ಬಿಲ್ ಗೇಟ್ಸ್ 1973 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದುವಾಗಲೇ ಅರ್ಧಕ್ಕೆ ಬಿಟ್ಟಿದ್ದರು. ಅದೇ ವಿವಿಯಿಂದ ಅವರು ಗೌರವ ಡಾಕ್ಟರೆಟ್ ಪದವಿ ಪಡೆದುಕೊಂಡರು. ಓರಾಕಲ್ ಕಂಪನಿಯ ಸಂಸ್ಥಾಪಕ ಲ್ಯಾರಿ ಎಲಿಸನ್ ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಪದವಿ ಅರ್ಧಕ್ಕೆ ಮೊಟಕುಗೊಳಿಸಿದ್ದರು.

ಉಬರ್ ಕ್ಯಾಬ್ ನ ಸಂಸ್ಥಾಪಕ ಟ್ರಾವಿಸ್ ಕಲೋನಿಕ್ 21ನೇ ವರ್ಷಕ್ಕೆ ಕಾಲೇಜ್ ಬಿಟ್ಟಿದ್ದರು. ನ್ಯೂ ವೆಲ್ ವಿಡಿಯೋ ಗೇಮ್ ಕಂಪನಿಯ ಸಹ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಗೇಬ್ ನ್ಯೂವೆಲ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಅರ್ಧಕ್ಕೆ ಬಿಟ್ಟಿದ್ದರು. ಹೀಗೆ ಐಟಿ ಫೀಲ್ಡ್ ನಲ್ಲಿ ಶತಕೋಟ್ಯಾಧಿಪತಿಗಳಾಗಿರುವ ಇವರೆಲ್ಲಾ ಪದವಿಯನ್ನೇ ಪೂರ್ಣಗೊಳಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...