alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ಮಾರುಕಟ್ಟೆಯಲ್ಲಿ ತಲ್ಲಣ: 5 ನಿಮಿಷದಲ್ಲೇ ಮಂಗಮಾಯವಾಯ್ತು 4 ಲಕ್ಷ ಕೋಟಿ ಹಣ

ಷೇರು ಮಾರುಕಟ್ಟೆಯೇ ಹಾಗೆ. ಈ ಕ್ಷಣ ಇದ್ದ ಹಾಗೆ ಮುಂದಿನ ಕ್ಷಣ ಇರದು. ನಿನ್ನೆಯಷ್ಟೇ(ಬುಧವಾರ) ಮಾರುಕಟ್ಟೆಯ ಏರುಗತಿಯನ್ನು ಗಮನಿಸಿ ಹೂಡಿಕೆ ಮಾಡಿದವರು ಈ ಕ್ಷಣ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕಾರಣ ಕೇವಲ ಐದೇ ನಿಮಿಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ವ್ಯಾಪಕ ಬದಲಾವಣೆಯಾದ ಕಾರಣ ಹೂಡಿಕೆದಾರರ ಸುಮಾರು 4 ಲಕ್ಷ ಕೋಟಿಗೂ ಅಧಿಕ ಹಣ ಖೋತಾ ಹೊಡೆದಿದೆ.

ಕಳೆದ ಕೆಲವು ದಿನಗಳಿಂದ ಮಾರುಕಟ್ಟೆ ಸ್ಥಿತಿ ಪಾತಾಳಕ್ಕೆ ಕುಸಿದಿತ್ತು. ನಿನ್ನೆ ದಿನಾಂತ್ಯ ವೇಳೆಗೆ ಏರುಗತಿಯಲ್ಲಿ ನಿಂತಿದ್ದ ದೇಶೀಯ ಮಾರುಕಟ್ಟೆ ಗುರುವಾರ ಬೆಳಗ್ಗೆ ನೋಡುನೋಡುತ್ತಿದ್ದಂತೆಯೇ ಕುಸಿದಿದೆ.

ಅಂಕಿಅಂಶಗಳ ಪ್ರಕಾರ ಐದೇ ನಿಮಿಷದಲ್ಲಿ ಬಿಎಸ್ಇ ಪಟ್ಟಿಯಲ್ಲಿರುವ ಕಂಬೈನ್ಸ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ನ ಎಲ್ಲಾ ಕಂಪನಿಗಳು ಸುಮಾರು 134.38 ಲಕ್ಷ ಕೋಟಿ ನಷ್ಟ ಅನುಭವಿಸಿತು. ಬುಧವಾರದಂದು ಬಿಎಸ್ಇ ಲಿಸ್ಟಿನಲ್ಲಿರುವ ಕಂಪನಿಗಳು ಸುಮಾರು 138,39,750 ಕೋಟಿ ಲಾಭ ಗಳಿಸಿತ್ತು. ಆಗಸ್ಟ್ 30ರಂದು ಅಂತೂ ಸಾರ್ವಕಾಲಿಕ ದಾಖಲೆಯ 1,59,34,696 ಕೋಟಿಯಷ್ಟು ಗಳಿಸಿತ್ತು.

ಗುರುವಾರ ಬೆಳಗ್ಗೆ ದೇಶೀಯ ಷೇರುಗಳೊಂದಿಗೆ ಏಷ್ಯನ್ ಷೇರುಗಳೂ ಶೇ.5ರಷ್ಟು ನೆಲಕಚ್ಚಿದ್ದು, ರಾತ್ರಿಬೆಳಗಾಗುವುದರೊಳಗೆ ಅಮೆರಿಕದ ಸ್ಟಾಕುಗಳಲ್ಲಿನ ಕುಸಿತವೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...