alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ಟಬಲ್ ಪೆಟ್ರೋಲ್ ಬಂಕ್ ಶುರುಮಾಡಿ ಕೈ ತುಂಬಾ ಹಣ ಗಳಿಸಿ

ಹೊಸ ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ರೆ ಸ್ವಲ್ಪ ದಿನ ಕಾಯುವುದು ಬೆಸ್ಟ್. ಕೇವಲ 2 ಗಂಟೆಗಳಲ್ಲಿ ಅಳವಡಿಸಬಲ್ಲ ಪೋರ್ಟಬಲ್ ಪೆಟ್ರೋಲ್ ಬಂಕ್ ಶುರು ಮಾಡಿ ಉತ್ತಮ ಹಣ ಗಳಿಸುವ ಅವಕಾಶ ಸಿಗಲಿದೆ.

ಇದಕ್ಕಾಗಿ ಸಾಮಾನ್ಯ ಪೆಟ್ರೋಲ್ ಬಂಕ್ ನಂತೆ ತುಂಬಾ ಜಾಗಬೇಕಾಗಿಲ್ಲ. ಇದನ್ನು ಅಳವಡಿಸಲು 2 ಗಂಟೆ ಮಾತ್ರವಲ್ಲ ತೆಗೆಯಲೂ 2 ಗಂಟೆ ಸಾಕು. ಇದಕ್ಕೆ ಹೆಚ್ಚು ಸಿಬ್ಬಂದಿ ಅಗತ್ಯವೂ ಇಲ್ಲ. ಡಿಜಿಟಲ್ ಪೇಮೆಂಟ್ ಮೂಲಕ ಪಾವತಿ ನಡೆಯಲಿದೆ. ಶೀಘ್ರವೇ ಪೋರ್ಟಬಲ್ ಪೆಟ್ರೋಲ್ ಬಂಕ್ ಕೆಲಸ ಶುರು ಮಾಡಲಿದೆ.

ಪೆಟ್ರೋಲಿಯಂ ಸಚಿವಾಲಯ ಪೋರ್ಟಬಲ್ ಪೆಟ್ರೋಲ್ ಬಂಕ್ ಗೆ ಒಪ್ಪಿಗೆ ನೀಡಿದೆ. ಪೋರ್ಟಬಲ್ ಪೆಟ್ರೋಲ್ ಬಂಕ್ ಗೆ ಸರ್ಕಾರ 1,600 ಕೋಟಿ ರೂಪಾಯಿ ಖರ್ಚು ಮಾಡಲಿದೆಯಂತೆ. ಗ್ರಾಮೀಣ ಹಾಗೂ ದೂರ ದೂರದ ಪ್ರದೇಶಗಳಿಗೆ ಇದು ತುಂಬಾ ಒಳ್ಳೆಯದು. 400 ಚದರ ಮೀಟರ್ ಭೂಮಿಯಿದ್ರೆ ನೀವು ಎಲ್ಲಿ ಬೇಕಾದ್ರೂ ಪೆಟ್ರೋಲ್ ಬಂಕ್ ಶುರು ಮಾಡಬಹುದು. ಆದ್ರೆ ಆರಂಭದಲ್ಲಿ ಖರ್ಚು ಹೆಚ್ಚಾಗಲಿದೆ. 90 ಲಕ್ಷದಿಂದ ಸುಮಾರು 1.20 ಕೋಟಿ ಖರ್ಚಾಗುವ ಸಾಧ್ಯತೆಯಿದೆ. ಇದ್ರಲ್ಲಿ ಶೇಕಡಾ 80 ರಷ್ಟನ್ನು ಬ್ಯಾಂಕ್  ನೀಡಲಿದೆಯಂತೆ. ಸರ್ಕಾರ ಟೆಂಡರ್ ಕರೆಯಲಿದ್ದು, ಅದ್ರ ನಂತ್ರ ಪೋರ್ಟಬಲ್ ಪೆಟ್ರೋಲ್ ಬಂಕ್ ಶುರು ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...