alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬಂಕ್ ತೆರೆದು ಮೊದಲ ದಿನದಿಂದ್ಲೇ ಶುರು ಮಾಡಿ ಗಳಿಕೆ

ನಿರಂತರವಾಗಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬರ್ತಿದೆ. ಹೊಸ ಬ್ಯುಸಿನೆಸ್ ಶುರು ಮಾಡುವವರು ಪೆಟ್ರೋಲ್ ಬಂಕ್ ಶುರು ಮಾಡಿ ಕೈ ತುಂಬ ಹಣ ಗಳಿಸಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಬ್ಯುಸಿನೆಸ್ ಗೆ ನೆರವಾಗಲಿದೆ.

ಹೆಚ್ಪಿಸಿಎಲ್ ದೇಶದಲ್ಲಿ 500 ಹೊಸ ಪೆಟ್ರೋಲ್ ಬಂಕ್ ತೆರೆಯುವ ಬಗ್ಗೆ ಪ್ಲಾನ್ ಮಾಡ್ತಿದೆ. ಹೆಚ್ಪಿಸಿಎಲ್ ಮ್ಯಾನೇಜರ್ ಕಂಪನಿ ವ್ಯವಹಾರ ವಿಸ್ತರಣೆ ಬಗ್ಗೆ ಕೆಲ ದಿನಗಳ ಹಿಂದಷ್ಟೆ ಮಾಹಿತಿ ನೀಡಿದ್ದಾರೆ. 2017-2018 ರ ಅವಧಿಯಲ್ಲಿ ಹೆಚ್ಪಿಸಿಎಲ್ 669 ಹೊಸ ಪೆಟ್ರೋಲ್ ಬಂಕ್ ಗೆ ಒಪ್ಪಿಗೆ ನೀಡಿತ್ತು. ಸದ್ಯ ದೇಶದಲ್ಲಿ 15,062 ರಿಟೇಲ್ ಔಟ್ಲೆಟ್ ಇದೆ. 2018-2019 ರಲ್ಲಿ 500 ಹೊಸ ಬಂಕ್ ಗೆ ಕಂಪನಿ ಒಪ್ಪಿಗೆ ನೀಡಿದೆ.

ಹೆಚ್ಸಿಪಿಎಲ್ ಪೆಟ್ರೋಲ್ ಬಂಕ್ ಡೀಲರ್ ಶಿಪ್ ಪಡೆಯಲು ನೀವು ಆಸಕ್ತರಾಗಿದ್ದರೆ ವೆಬ್ಸೈಟ್ ನಲ್ಲಿ ವಿಸ್ತಾರವಾದ ಮಾಹಿತಿ ಲಭ್ಯವಿದೆ. ಪೆಟ್ರೋಲ್ ಬಂಕ್ ಮಾಲೀಕರಾಗಲು ಮೊದಲು ಭಾರತೀಯ ನಾಗರೀಕರಾಗಿರಬೇಕು. ವಯಸ್ಸು 22 ವರ್ಷದಿಂದ 55 ವರ್ಷದೊಳಗಿರಬೇಕು. ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು.

ಪೆಟ್ರೋಲ್ ಬಂಕ್ ತೆರೆಯಲು ನಿಮ್ಮ ಬಳಿ ಜಮೀನಿರಬೇಕು. ಬಾಡಿಗೆ ಪಡೆಯುವುದಾದ್ರೆ ಮಾಲೀಕನ ಒಪ್ಪಿಗೆ ಬೇಕು. ಸಂಬಂಧಿಕರ ಭೂಮಿಯಾದ್ರೂ ಅವ್ರ ಒಪ್ಪಿಗೆ ಪತ್ರ ಬೇಕು. ಕೃಷಿ ಭೂಮಿ ಆಸುಪಾಸು ಈ ಭೂಮಿ ಇರಬಾರದು. ಭೂಮಿ ಬಗ್ಗೆ ದಾಖಲೆ ಸರಿಯಾಗಿರಬೇಕು.

ಪೆಟ್ರೋಲ್ ಬಂಕ್ ತೆರೆಯಲು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೇರೆ ಬೇರೆ ಖರ್ಚು ಬೀಳುತ್ತದೆ. ಗ್ರಾಮೀಣ ಪ್ರದೇಶದಲ್ಲಿ 12 ಲಕ್ಷ ರೂಪಾಯಿ ಬಂಡವಾಳ ಬೇಕು. ನಗರದಲ್ಲಿ 25 ಲಕ್ಷ ರೂಪಾಯಿ ಖರ್ಚು ಬೀಳುತ್ತದೆ. ಕಂಪನಿ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಿದ ನಂತ್ರ ಭೂಮಿ ವೀಕ್ಷಣೆ ಮಾಡಿ ನಂತ್ರ ಕಂಪನಿ ನಿಮ್ಮನ್ನು ಸಂದರ್ಶನಕ್ಕೆ ಕರೆಯಲಿದೆ. ಸಂದರ್ಶನದ ನಂತ್ರ ಮಂಜೂರಿ ನೀಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...