alex Certify
ಕನ್ನಡ ದುನಿಯಾ       Mobile App
       

Kannada Duniya

80 ಸಾವಿರದಲ್ಲಿ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಲಾಭ ಪಡೆಯಿರಿ

ದೊಡ್ಡ ನಗರಗಳಲ್ಲಿ ಬ್ಯುಸಿನೆಸ್ ಶುರು ಮಾಡಲು ಲಕ್ಷಾಂತರ ರೂಪಾಯಿ ಬೇಕು. ಆದ್ರೆ ಸಣ್ಣ ಸಣ್ಣ ನಗರ, ಪಟ್ಟಣಗಳಲ್ಲಿ ಕಡಿಮೆ ಖರ್ಚಿನಲ್ಲಿ ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕೆ ಸರ್ಕಾರ ಕೂಡ ಸಹಾಯ ಮಾಡುತ್ತದೆ. ಪ್ರಧಾನಿ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಂ ಅಥವಾ ಖಾದಿ ವಿಲೇಜ್ ಇಂಡಸ್ಟ್ರೀಸ್ ಪ್ರೋಗ್ರಾಂ ಮೂಲಕ ನಿಮಗೆ ಸಬ್ಸಿಡಿ ಸಿಗಲಿದೆ.

80 ಸಾವಿರ ರೂಪಾಯಿ ಹೂಡಿಕೆ ಮಾಡಿ ಕೈತುಂಬಾ ಲಾಭ ಪಡೆಯುವ ಬ್ಯುಸಿನೆಸ್ ಒಂದರ ಬಗ್ಗೆ ನಾವು ಹೇಳ್ತೇವೆ. ಈ ಬ್ಯುಸಿನೆಸ್ ನಲ್ಲಿ ಶೇಕಡಾ 90 ರಷ್ಟು ಸಾಲ ನಿಮಗೆ ಸಿಗುತ್ತದೆ. ಶೇಕಡಾ 15-25 ರಷ್ಟು ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ. ಗೋಧಿ ಹಿಟ್ಟಿನ ಗಿರಣಿ ಘಟಕ ಶುರು ಮಾಡಬಹುದು. ಗೋಧಿ, ಮೈದಾ, ರವೆಯನ್ನು ಪ್ಯಾಕ್ ಮಾಡಿ ಮಾರಾಟ ಮಾಡಬಹುದು. ಈ ಉತ್ಪನ್ನಗಳಿಗೆ ಹೊಟೇಲ್ ಹಾಗೂ ಬೇಕರಿಯಲ್ಲಿ ಬೇಡಿಕೆ ಹೆಚ್ಚಿದೆ.

ಗೋಧಿ ಗಿರಣಿಗೆ ಸುಮಾರು 8 ಲಕ್ಷ 85 ಸಾವಿರ ರೂಪಾಯಿ ವೆಚ್ಛವಾಗುತ್ತದೆ. ಕಟ್ಟಡಕ್ಕೆ 1.5 ಲಕ್ಷ ಹಾಗೂ ಹೂಡಿಕೆ ಎಂದು 4.5 ಲಕ್ಷ ರೂಪಾಯಿ ವೆಚ್ಛ ತೋರಿಸಬೇಕಾಗುತ್ತದೆ. ನೀವು ತೋರಿಸುವ ಒಟ್ಟು 8 ಲಕ್ಷ 85 ಸಾವಿರ ರೂಪಾಯಿ ವೆಚ್ಚದಲ್ಲಿ ಶೇಕಡಾ 90ರಷ್ಟು ಸಾಲ ನಿಮಗೆ ಸಿಗಲಿದೆ.

ವರ್ಷಕ್ಕೆ ನಿಮಗೆ ಸುಮಾರು 7.82 ಲಕ್ಷ ರೂಪಾಯಿ ಆದಾಯ ಬರಲಿದೆ. ಶೇಕಡಾ 60ರಷ್ಟು ನಿಮ್ಮ ಉತ್ಪನ್ನ ಮಾರಾಟವಾದ್ರೆ ನಿಮಗೆ 4.69 ಲಕ್ಷ ರೂಪಾಯಿ ವರ್ಷಕ್ಕೆ ಆದಾಯ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...