alex Certify
ಕನ್ನಡ ದುನಿಯಾ       Mobile App
       

Kannada Duniya

1 ಲಕ್ಷ ರೂ. ಹೂಡಿಕೆ ಮಾಡಿ 3 ಲಕ್ಷದವರೆಗೆ ಆದಾಯ ಗಳಿಸಿ

ಪ್ಲಾಸ್ಟಿಕ್ ಬಾಟಲ್ ನೀರಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಇಂಥ ಸಮಯದಲ್ಲಿ ಪ್ಲಾಸ್ಟಿಕ್ ಬಾಟಲಿ ತಯಾರಿಕಾ ಘಟಕವನ್ನು ನೀವು ಶುರು ಮಾಡಬಹುದು. ಇದಕ್ಕೆ ಸರ್ಕಾರ ಹಾಗೂ ಬ್ಯಾಂಕ್ ಸಾಲ ಸೌಲಭ್ಯವನ್ನೂ ನೀಡ್ತಿದೆ. ಖಾದಿ ಮತ್ತು ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ಲಾಸ್ಟಿಕ್ ಬಾಟಲಿಯ ಮಾದರಿ ಯೋಜನಾ ವಿವರವನ್ನು ತಯಾರಿಸಿದೆ. ಈ ಯೋಜನೆಯ ವರದಿಯನ್ನು ಆಧರಿಸಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಸಾಲ ಪಡೆದು ಪ್ಲಾಸ್ಟಿಕ್ ಬಾಟಲಿ ತಯಾರಿಕ ಘಟಕವನ್ನು ನೀವು ಶುರು ಮಾಡಬಹುದು. 2.5 ಲಕ್ಷ ಬಾಟಲಿ ತಯಾರಿಸುವ ಘಟಕ ಶುರು ಮಾಡುವ ಆಸಕ್ತಿ ನಿಮಗಿದ್ದರೆ ನೀವು 4 ಲಕ್ಷ ರೂಪಾಯಿ ಮೌಲ್ಯದ ಉಪಕರಣವನ್ನು ಖರೀದಿಸಬೇಕಾಗುತ್ತದೆ. ಮೋಲ್ಡಿಂಗ್ ಉಪಕರಣ, ಹ್ಯಾಂಡ್ಲಿಂಗ್ ಉಪಕರಣ ಎಲ್ಲವೂ ಬರುತ್ತದೆ. ಸುಮಾರು 1.80 ಲಕ್ಷ ರೂಪಾಯಿಯನ್ನು ಕೆಲಸದ ಬಂಡವಾಳವಾಗಿ ತೆಗೆದಿಡಬೇಕಾಗುತ್ತದೆ. ಕೆಲಸದ ಸ್ಥಳ, ಕೆಲಸಗಾರರ ಸಂಬಳ ಸೇರಿ 3 ಲಕ್ಷ ಖರ್ಚು ಮಾಡಬೇಕಾಗುತ್ತದೆ. ಅಂದ್ರೆ ಎಲ್ಲ ಸೇರಿ ಸುಮಾರು 8 ಲಕ್ಷ 80 ಸಾವಿರ ರೂಪಾಯಿ ಹೂಡಿಕೆಯಾಗುತ್ತದೆ.

ಯೋಜನಾ ವರದಿ ಆಧಾರದ ಮೇಲೆ ಪ್ರಧಾನಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಕಾರ್ಯಕ್ರಮದಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಶೇಕಡಾ 90ರಷ್ಟು ಸಾಲ ನಿಮಗೆ ಸಿಗುತ್ತದೆ. ಅಂದ್ರೆ ನಿಮ್ಮ ಬಳಿ 1 ಲಕ್ಷ ರೂಪಾಯಿ ಹಣವಿದ್ದರೆ ಸಾಕು. ಉಳಿದ ಹಣ ಸಾಲದ ರೂಪದಲ್ಲಿ ಸಿಗುತ್ತದೆ.

2.5 ಲಕ್ಷ ಬಾಟಲಿಯನ್ನು ಪ್ರತಿ ಬಾಟಲಿಗೆ 4 ರೂಪಾಯಿ 50 ಪೈಸೆಯಂತೆ ಮಾರಾಟ ಮಾಡಿದ್ರೆ ನಿಮಗೆ 13 ಲಕ್ಷ 82 ಸಾವಿರ ರೂಪಾಯಿ ಸಿಗಲಿದೆ. ಉತ್ಪಾದನಾ ವೆಚ್ಚ 11 ಲಕ್ಷ ರೂಪಾಯಿಯಾದ್ರೂ ನಿಮಗೆ ಸುಮಾರು 2 ಲಕ್ಷ 82 ಸಾವಿರ ರೂಪಾಯಿ ಲಾಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...