alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 999 ರೂ.ಗೆ ಈ ಕಂಪನಿ ನೀಡ್ತಿದೆ ವಿಮಾನದ ಟಿಕೆಟ್

ಸ್ಪೈಸ್ ಜೆಟ್ ಮಾನ್ಸೂನ್ ಸೇಲ್ ಶುರು ಮಾಡಿದೆ. ಪ್ರಯಾಣಿಕರಿಗೆ 999 ರೂಪಾಯಿಗೆ ವಿಶೇಷ ಕೊಡುಗೆ ನೀಡುತ್ತಿದೆ. ಮೆಗಾ ಮಾನ್ಸೂನ್ ಸೇಲ್ ಜುಲೈ 4 ರಿಂದ 8ರವರೆಗೆ ನಡೆಯಲಿದೆ. ಬುಕ್ ಆಗಿರುವ ಟಿಕೆಟ್ ನಲ್ಲಿ ಪ್ರಯಾಣಿಕರು ಅಕ್ಟೋಬರ್ 8 ರವರೆಗೆ ಪ್ರಯಾಣ ಬೆಳೆಸಬಹುದಾಗಿದೆ.

999 ರೂಪಾಯಿ ಆಫರ್ ಕಡಿಮೆ ದೂರದವರೆಗೆ ಮಾತ್ರ ಅನ್ವಯವಾಗಲಿದೆ. ದೆಹಲಿಯಿಂದ ಜೈಪುರ ಅಥವಾ ಡೆಹ್ರಾಡೂನ್ ಪ್ರಯಾಣಕ್ಕೆ ಈ ಆಫರ್ ಸಿಗ್ತಿದೆ. ದೂರ ಹೆಚ್ಚಾದಂತೆ ಬೆಲೆ ಕೂಡ ಹೆಚ್ಚಾಗಲಿದೆ. ಇದ್ರ ಜೊತೆಗೆ ಸ್ಪೈಸ್ ಜೆಟ್ ಬೇರೆ ಸೇವೆಗಳಿಗೆ ಕೂಡ ಶೇಕಡಾ 20 ರಷ್ಟು ರಿಯಾಯಿತಿ ನೀಡ್ತಿದೆ. ಈ ರಿಯಾಯಿತಿ ಸೀಟ್, ಮೈಲಿ, ಸ್ಪೈಸ್ಮ್ಯಾಕ್ಸ್ ಮತ್ತು ಇತರ ವಿಷಯಗಳಿಗೆ ಅನ್ವಯಿಸುತ್ತದೆ.

ಈ ರಿಯಾಯಿತಿ ಪಡೆಯಲು ಪ್ರಯಾಣಿಕರು ADDON20 ಪ್ರೋಮೋ ಕೋಡ್ ಬಳಸಬಹುದಾಗಿದೆ. ಕಂಪನಿ ಈ ಆಫರ್ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಕೆಲವು ಷರತ್ತುಗಳೊಂದಿಗೆ ಈ ಆಫರ್ ನೀಡಲಾಗ್ತಿದೆ. ಒಂದು ಬದಿ ಪ್ರಯಾಣಕ್ಕೆ ಮಾತ್ರ ಈ ಕೊಡುಗೆ ಸಿಗಲಿದೆ. ಆಫರ್ ಬದಲಾಯಿಸುವ ಹಕ್ಕು ಕಂಪನಿಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...