alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಬರಲಿದೆ ಮತ್ತೊಂದು ಹೊಸ ಫೀಚರ್

ಯಾರಿಗೋ ಕಳಿಸಬೇಕಿದ್ದ ಮೆಸೇಜ್ ಇನ್ಯಾರಿಗೋ ಹೋದ್ರೆ ಅದರಿಂದ ಮುಜುಗರ ಮಾತ್ರವಲ್ಲ ಅನಾಹುತವೂ ಆಗಬಹುದು. ವಾಟ್ಸಾಪ್ ನಲ್ಲೂ ಕೂಡ ಇಂಥದ್ದೇ ಸಮಸ್ಯೆ ಇತ್ತು. ಡಬಲ್ ಟಿಕ್ ಬಂದ್ರೆ ನೀವು ಕಳಿಸಿದ ಮೆಸೇಜ್ ಸೆಂಟ್ ಆಗಿದೆ ಎಂದರ್ಥ. ಸಿಂಗಲ್ ಟಿಕ್ ಇದ್ರೆ ಮೆಸೇಜ್ ಡೆಲಿವರಿ ಆಗಿಲ್ಲ ಎಂದರ್ಥ.

ಆದ್ರೆ ಈ ಫೀಚರ್ ಸದ್ಯದಲ್ಲೇ ಬದಲಾಗಲಿದೆ. ಬಳಕೆದಾರರು ಪಿಕ್ಚರ್ ಅಥವಾ GIF ಕಳಿಸಿ 5 ನಿಮಿಷಗಳೊಳಗೆ ಅದನ್ನು ಡಿಲೀಟ್ ಮಾಡುವ ಅಥವಾ ರಿಕಾಲ್ ಮಾಡುವ ಆಪ್ಷನ್ ಸದ್ಯದಲ್ಲೇ ವಾಟ್ಸಾಪ್ ನಲ್ಲಿ ಬರಲಿದೆ. ಸೆಂಟ್ ಮೆಸೇಜ್ ರಿಕಾಲ್ ಮಾಡಬಹುದಾದ ಫೀಚರ್, ಸದ್ಯ ಟೆಸ್ಟಿಂಗ್ ಹಂತದಲ್ಲಿದೆ.

ಈ ಪ್ರಯೋಗ ಯಶಸ್ವಿಯಾಗಿದೆ ಅಂತಾ ಹೇಳಲಾಗ್ತಿದೆ. ಡಿಲೀಟ್ ಫಾರ್ ಎವ್ರಿವನ್ ಅನ್ನೋ ಈ ಸೇವೆಯನ್ನು ಇದುವರೆಗೂ ಆ್ಯಕ್ಟಿವೇಟ್ ಮಾಡಿಲ್ಲ. ಎಲ್ಲರಿಗೂ ಕಳಿಸಿದ್ದ ಮೆಸೇಜ್ ರಿಕಾಲ್ ಮಾಡುವ ಹೊಸ ಆಪ್ಷನ್ ಬಗ್ಗೆ ಪ್ರಯೋಗ ನಡೆಯುತ್ತಿದೆ.

ಈ ಫೀಚರ್ ಮೂಲಕ ನೀವು ಯಾವುದೇ ವ್ಯಕ್ತಿ ಅಥವಾ ಗ್ರೂಪ್ ಗೆ ಕಳಿಸಿರೋ ಮೆಸೇಜ್ ಅನ್ನು ರಿಕಾಲ್ ಮಾಡಬಹುದು. ಅದಕ್ಕೆ 5 ನಿಮಿಷಗಳ ಕಾಲಾವಕಾಶವೂ ಇರುತ್ತದೆ. ಆ್ಯಂಡ್ರಾಯ್ಡ್ ಮತ್ತು Ios ಎರಡೂ ಮಾದರಿಯಲ್ಲೂ ಇದು ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...