alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಮನೆ ಬಾಗಿಲಿಗೆ ಬರಲಿದೆ ಪೆಟ್ರೋಲ್, ಡೀಸೆಲ್

ಇನ್ಮೇಲೆ ಪೆಟ್ರೋಲ್, ಡೀಸೆಲ್ ಕೂಡ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಪೆಟ್ರೋಲ್, ಡೀಸೆಲ್ ಹೋಮ್ ಡೆಲಿವರಿ ಕುರಿತಂತೆ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಪೆಟ್ರೋಲಿಯಂ ಹಾಗೂ ಸ್ಫೋಟಕ ಸುರಕ್ಷತಾ ಸಂಸ್ಥೆ ಜೊತೆಗೆ ಚರ್ಚೆ ನಡೆಸಿದೆ.

ಅಷ್ಟೇ ಅಲ್ಲ ಪೆಟ್ರೋಲ್, ಡೀಸೆಲ್ ಹೋಮ್ ಡೆಲಿವರಿ ಮಾಡಲು ಬಳಕೆಯಾಗುವ ಕಂಟೇನರ್ ಒಂದನ್ನು ಕೂಡ ವಿನ್ಯಾಸ ಮಾಡಲಾಗಿದೆ. ಅಲ್ಪಸ್ವಲ್ಪ ಬದಲಾವಣೆಯ ಅಗತ್ಯವಿದೆ ಅಷ್ಟೆ ಅಂತಾ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ.

ಪೆಟ್ರೋಲ್ ತುಂಬಾ ಅಪಾಯಕಾರಿ ಇಂಧನವಾಗಿರೋದ್ರಿಂದ ಸದ್ಯ ಡೀಸೆಲ್ ಹೋಮ್ ಡೆಲಿವರಿಗೆ ಮಾತ್ರ ಅನುಮತಿ ನೀಡಲಾಗಿದೆ. ಪೆಟ್ರೋಲಿಯಂ ಗ್ಯಾಸ್ ಹಾಗೂ ಅಡುಗೆ ಅನಿಲವನ್ನು ಪೈಪ್ ಮುಖಾಂತರ ಪೂರೈಕೆ ಮಾಡಲಾಗುತ್ತಿದೆ.

ಕೆರೊಸಿನ್ ಕೂಡ ಅಂಗಡಿಗಳಲ್ಲಿ ಕಂಟೇನರ್ ಗಳಲ್ಲಿ ಸಿಗುತ್ತಿದೆ. ಹಾಗಾಗಿ ಪೆಟ್ರೋಲ್, ಡೀಸೆಲ್ ಕೂಡ ಇದೇ ರೀತಿ ಲಭ್ಯವಾಗುವಂತೆ ಮಾಡಬೇಕು ಅನ್ನೋದು ಸರ್ಕಾರದ ಉದ್ದೇಶ. ಆದ್ರೆ ಸುರಕ್ಷತೆಯ ಬಗ್ಗೆ ಇನ್ನಷ್ಟು ಗಮನಹರಿಸಬೇಕಾಗಿರುವುದರಿಂದ ಇದುವರೆಗೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...