alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಪಾನ್ ಕಾರ್ಡ್ ನಲ್ಲಿರಲ್ಲ ತಂದೆಯ ಹೆಸರು

ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಹೊರಡಿಸಲಿರುವ ಅಧಿಸೂಚನೆಯ ಪ್ರಕಾರ ಇನ್ಮುಂದೆ ಪ್ಯಾನ್ ಕಾರ್ಡ್ ಪಡೆಯಬಯಸುವವರಿಗೆ ಹೊಸ ನಿಯಮ ಜಾರಿಗೆ ಬರಲಿದೆ. ಪ್ಯಾನ್ ಕಾರ್ಡ್ ಪಡೆಯೋಕೆ ಇನ್ಮುಂದೆ ತಂದೆಯ ಹೆಸರು ಕಡ್ಡಾಯವಲ್ಲ ಅನ್ನೋ ಶಿಫಾರಸ್ಸನ್ನು ಕಾಲಂ 114ರ ಅಡಿಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಸಿಂಗಲ್ ಪೇರೆಂಟ್ ಅಥವಾ ತಾಯಿಯ ಬಳಿ ಬೆಳೆದವರು ತಂದೆಯ ಹೆಸರನ್ನು ಪ್ಯಾನ್ ಕಾರ್ಡ್ನಲ್ಲಿ ಬಳಸೋದು ಕಡ್ಡಾಯವಲ್ಲ. ಸದ್ಯ 1962ರ ಆದಾಯ ತೆರಿಗೆ ಮಾರ್ಗದರ್ಶಿ ಸೂತ್ರಗಳ 114ನೇ ಕಾಲಂ ನ 49ಎ ಮತ್ತು 49ಎಎ ಆಧಾರದಲ್ಲಿ ಪ್ಯಾನ್ ಕಾರ್ಡ್ ಬಳಕೆಯಾಗ್ತಿದೆ. ಇದರಲ್ಲಿ ತಿದ್ದುಪಡಿ ತರೋದಕ್ಕೆ ನಿರ್ಧರಿಸಲಾಗಿದೆ. ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಹಲವು ಮನವಿಗಳು ಬಂದಂತಾ ಹಿನ್ನಲೆಯಲ್ಲಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ.

ಸದ್ಯ ಜಾರಿಯಲ್ಲಿರುವ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ಗೆ ತಂದೆಯ ಹೆಸರನ್ನು ನೀಡುವುದು ಕಡ್ಡಾಯವಾಗಿದೆ. ಹಾಗು ಆದಾಯ ತೆರಿಗೆ ವಿವರಗಳನ್ನು ಘೋಷಿಸುವುದು ಕಡ್ಡಾಯವಾಗಿದೆ. ಸಿಂಗಲ್ ಪೇರೆಂಟ್ ಬಳಿಯಲ್ಲಿ ಬೆಳೆದವರಿಗೆ ಪ್ಯಾನ್ಕಾರ್ಡ್ ಗೆ ಅರ್ಜಿ ಸಲ್ಲಿಸೋಕೆ ಇರಿಸುಮುರಿಸು ಉಂಟಾಗ್ತಿತ್ತು. ಈಗ ಈ ನಿಯಮದಲ್ಲಿ ವಿನಾಯಿತಿ ನೀಡಲಾಗಿದ್ದು ಸೆಪ್ಟೆಂಬರ್ 17ರ 2018ರಿಂದ ಹೊಸ ನಿಯಮ ಜಾರಿಗೆ ಬರುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...