alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್ಕೆಟ್’ ನಿಂದ ಇನ್ನು ಹಾಲು ಪೂರೈಕೆ

ಹಣ್ಣು, ತರಕಾರಿ, ಅಕ್ಕಿ, ಬೇಳೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದ ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆ ಬಿಗ್ ಬಾಸ್ಕೆಟ್, ಇದೀಗ ತಮ್ಮ ಗ್ರಾಹಕರಿಗೆ ಹಾಲನ್ನೂ ಪೂರೈಕೆ ಮಾಡಲಿದೆ.

ಕ್ವಿಕ್ 24 ಎಂಬ ಸ್ವಾರ್ಟ್ ಅಪ್ ಸೇವೆಯನ್ನು ಇದಕ್ಕಾಗಿ ಪ್ರಾರಂಭಿಸಲಾಗಿದೆ. ಇದರ ಅಂಗವಾಗಿ ಗ್ರಾಹಕರಿಗೆ ಬೇಕೆಂದಾಗ ಹಾಲು ಪಡೆಯಲು ಆಯ್ದ ಸ್ಥಳಗಳಲ್ಲಿ ಸ್ಮಾರ್ಟ್ ವೆಂಡಿಂಗ್ ಮೆಷಿನ್ ಗಳನ್ನು ಸಹ ಅಳವಡಿಸಲಿದೆ.

ಇ-ಕಾಮರ್ಸ್ ದೈತ್ಯರಾದ ಅಮೆಝಾನ್ ಹಾಗೂ ಫ್ಲಿಕ್ ಕಾರ್ಟ್ ಸಂಸ್ಥೆಗಳು ಭಾರತದಲ್ಲಿ ದಿನಸಿ ಸಾಮಾನುಗಳ ಪೂರೈಕೆಗೆ ತೊಡಗಿದ ಸಂದರ್ಭದಲ್ಲೇ ಬಿಗ್ ಬಾಸ್ಕೆಟ್ ಈ ನಿರ್ಧಾರಕ್ಕೆ ಬಂದಿದೆ. ಪ್ರಾರಂಭಿಕ ಹಂತದಲ್ಲಿ ಬೆಂಗಳೂರು ಮತ್ತು ಪುಣೆಗಳಲ್ಲಿ ಇದನ್ನು ಅನುಷ್ಠಾನಕ್ಕೆ ತಂದು ಬಳಿಕ ಹಂತ ಹಂತವಾಗಿ ಇತರೆ ನಗರಗಳಿಗೂ ವಿಸ್ತರಿಸುವ ಪ್ಲಾನ್ ಕೂಡ ರೆಡಿಯಾಗಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ 100 ಸ್ಮಾರ್ಟ್ ವೆಂಡಿಂಗ್ ಮೆಷಿನ್ ಗಳನ್ನು ಅಳವಡಿಸಿಯಾಗಿದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

ಹಿಂದಿನ ರಾತ್ರಿ ಹಾಲಿಗೆ ಆನ್ ಲೈನ್ ನಲ್ಲಿ ಆರ್ಡರ್ ಸಲ್ಲಿಸಿದರೆ, ಬೆಳಗ್ಗೆ ನೀವು ಹಾಲನ್ನು ಪಡೆಯಬಹುದು. ಬೆಂಗಳೂರು ಮತ್ತು ಪುಣೆಗಳಲ್ಲಿ 20 ಸಾವಿರಕ್ಕೂ ಅಧಿಕ ಗ್ರಾಹಕರು ಒಲವು ತೋರಿದ್ದಾರೆ.

ಅಂಕಿ ಅಂಶಗಳ ಪ್ರಕಾರ ಮಿಲ್ಕ್ ಡೆಲಿವರಿ ಸ್ಟಾರ್ಟ್ ಅಪ್ ಗಳಾದ ಡೈಲಿ ನಿಂಜಗೆ ಪ್ರತಿನಿತ್ಯ 35000 ಕ್ಕೂ ಅಧಿಕ ಚಂದಾದಾರರಿದ್ದಾರಂತೆ. ಇದೇ ವೇಳೆ ಫುಡ್ ಡೆಲಿವರಿ ಆಪ್ ಸ್ವಿಗಿಯು ಸಹ ಈ ಹಾಲು ಪೂರೈಕೆ ಸೇವೆಯಲ್ಲಿ ಆಸಕ್ತಿ ತೋರಿದ್ದು, ಮಿಲ್ಕ್ ಡೆಲಿವರಿ ಸ್ಟಾರ್ಟ್ ಅಪ್ ಸೂಪರ್ ಡೈಲಿ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...