alex Certify
ಕನ್ನಡ ದುನಿಯಾ       Mobile App
       

Kannada Duniya

ಇ-ಆಮಂತ್ರಣ ಪತ್ರಿಕೆ ಕಳುಹಿಸಿ ಹಣ ಉಳಿಸಿದ ಬೆಡಗಿ

ಬಾಲಿವುಡ್ ನಟಿ ಸೋನಂ ಕಪೂರ್ ಮದುವೆ ಆಮಂತ್ರಣ ಪತ್ರಿಕೆ ಮೂಲಕ ಹೊಸ ಸಂದೇಶವೊಂದನ್ನು ಸಾರಿದ್ದಾಳೆ. ಪೇಪರ್ ಹಾಳು ಮಾಡುವ ಬದಲು ಎಲ್ಲರಿಗೂ ಸೋನಂ ಇ-ಆಮಂತ್ರಣ ಪತ್ರಿಕೆ ಕಳುಹಿಸಿದ್ದಾಳೆ. ಪೇಪರ್ ಉಳಿಸುವ ಜೊತೆಗೆ ಪರಿಸರದ ಬಗ್ಗೆ ಸೋನಂ ಸಂದೇಶ ಸಾರಿದ್ದಾಳೆ.

ಸೋನಂ ಮದುವೆ ಕಾರ್ಡ್ ನಲ್ಲಿ ಮರಗಳು, ಸಸ್ಯಗಳು ಮತ್ತು ಹೂಗಳಿಗೆ ಮಹತ್ವ ನೀಡಲಾಗಿದೆ. ಕಾರ್ಡಿನ ಹಿಂಭಾಗ ಸಂಪೂರ್ಣ ಹಸಿರಿನಿಂದ ಕೂಡಿದೆ. ಮೆಹಂದಿ, ಮದುವೆ ಹಾಗೂ ಪಾರ್ಟಿ ಮೂರು ಆಮಂತ್ರಣ ಪತ್ರಿಕೆಯಲ್ಲೂ ಪರಿಸರಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ.

ಸೋನಂ ಕಪೂರ್ ನಂತೆಯೇ ನೀವು ಕೂಡ ಕಡಿಮೆ ಖರ್ಚಿನಲ್ಲಿ ಪರಿಸರ ಸ್ನೇಹಿ ಅಥವಾ ನಿಮಗಿಷ್ಟವಾಗುವ ಇ-ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಬಹುದು. ಇದಕ್ಕೆ ಕಡಿಮೆ ಖರ್ಚು ತಗಲುವ ಜೊತೆಗೆ ಆಮಂತ್ರಣ ಪತ್ರಿಕೆ ಹಂಚಲು ಪರದಾಡಬೇಕಿಲ್ಲ. ಕಾರ್ಡ್ ಪ್ರಿಂಟ್ ಮಾಡಿ ಕಾಗದ ಹಾಳು ಮಾಡಬೇಕಿಲ್ಲ.

ಮದುವೆ ಕಾರ್ಡ್ ಗಳನ್ನು ತಯಾರಿಸಲು ಅನೇಕ ವೆಬ್ ಸೈಟ್ ಗಳು ನಿಮ್ಮ ನೆರವಿಗೆ ಬರಲಿವೆ. www.wedsite.com ಗೆ ಹೋಗಿ ನಿಮಗಿಷ್ಟವಾಗುವ ಮದುವೆ ಕಾರ್ಡನ್ನು ನೀವು ವಿನ್ಯಾಸಗೊಳಿಸಬಹುದು.

ಇದ್ರಲ್ಲಿ ಅನೇಕ ಅನುಕೂಲಗಳಿವೆ. 7 ದಿನ ಉಚಿತ ಪ್ರಯೋಗಕ್ಕೆ ಅವಕಾಶವಿದೆ. ಯಾವುದೇ ಜಾಹೀರಾತಿನ ಕಿರಿಕಿರಿಯಿಲ್ಲ. ಇದ್ರ ಬಳಕೆ ತುಂಬಾ ಸುಲಭ. ಬೇಕಾದಷ್ಟು ಫೋಟೋಗಳನ್ನು ಇದ್ರಲ್ಲಿ ಸಂಗ್ರಹಿಸಬಹುದು.ಸ್ಲೈಡ್ ಶೋ ಆಯ್ಕೆ ಕೂಡ ಇದ್ರಲ್ಲಿರುತ್ತದೆ. ನಿಮಗಿಷ್ಟವಾಗುವ ಹಾಡನ್ನು ಇದಕ್ಕೆ ಸೆಟ್ ಮಾಡಬಹುದು. ವಿಡಿಯೋ ಪ್ಲೇ ಆಯ್ಕೆಯಿದ್ದು ಯುಟ್ಯೂಬ್ ವಿಡಿಯೋ ಆಯ್ಕೆಯನ್ನೂ ನೀವು ಸೆಲೆಕ್ಟ್ ಮಾಡಬಹುದು.

ಒಂದು ತಿಂಗಳಿಗೆ ನಿಮಗೆ 1200 ಖರ್ಚು ಬರುತ್ತದೆ. 6 ತಿಂಗಳಿಗಾದ್ರೆ 2600 ಹಾಗೂ ಒಂದು ವರ್ಷಕ್ಕಾದ್ರೆ 3200 ಖರ್ಚು ಮಾಡಬೇಕಾಗುತ್ತದೆ. ಮದುವೆಗೆ 2 ವರ್ಷ ಮೊದಲೇ ನೀವು ವೆಡ್ಡಿಂಗ್ ಸೈಟ್ ಮಾಡಬಹುದು. ಅಕೌಂಟ್ ಅವಧಿ ಮುಗಿಯುವ ಮುನ್ನ ಕಾರ್ಡ್ ವಿನ್ಯಾಸವನ್ನು ಸಿಡಿಗೆ ಹಸ್ತಾಂತರಿಸಿಕೊಂಡು ಸದಾ ನಿಮ್ಮ ಜೊತೆಗಿಟ್ಟುಕೊಳ್ಳಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...