alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿ ಸೇಲ್ ನಲ್ಲಿ ಲಾಭ ಬಾಚಿಕೊಂಡ ಈ ಕಂಪನಿ

ಹಬ್ಬದ ಋತುವಿನಲ್ಲಿ ಎಲ್ಲ ಕಂಪನಿಗಳು ಭರ್ಜರಿ ಆಫರ್ ಗಳನ್ನು ನೀಡಿವೆ. ಆಕರ್ಷಕ ಕೊಡುಗೆ ನೀಡುವ ಭರದಲ್ಲಿ ಕೆಲವೊಮ್ಮೆ ಕಂಪನಿಗಳಿಗೆ ನಷ್ಟವುಂಟಾಗುವುದುಂಟು. ಆದ್ರೆ ಈ ಬಾರಿ ದೀಪಾವಳಿ ಋತುವಿನಲ್ಲಿ ಇ-ಕಾಮರ್ಸ್ ಕಂಪನಿ ಸ್ನ್ಯಾಪ್ ಡೀಲ್ ಖುಷಿ ದುಪ್ಪಟ್ಟಾಗಿದೆ.

ದೀಪಾವಳಿ ವೇಳೆ ಸ್ನ್ಯಾಪ್ ಡೀಲ್ ಮಾರಾಟ ಮಾತ್ರ ಜಾಸ್ತಿಯಾಗಿಲ್ಲ ಜೊತೆಗೆ ಲಾಭವನ್ನೂ ಕಂಪನಿ ಬಾಚಿಕೊಂಡಿದೆ. ಮಂಗಳವಾರ ಈ ಬಗ್ಗೆ ಕಂಪನಿ ಅಧಿಕೃತ ಹೇಳಿಕೆ ನೀಡಿದೆ. ಉಳಿದ ಹಬ್ಬದ ಋತುಗಳಿಗೆ ಹೋಲಿಸಿದ್ರೆ ಈ ಬಾರಿ ದೀಪಾವಳಿಯಲ್ಲಿ ಶೇಕಡಾ 6ರಷ್ಟು ಮಾರಾಟ ಹಾಗೂ ಲಾಭದಲ್ಲಿ ವೃದ್ಧಿಯಾಗಿದೆ ಎಂದು ಸ್ನ್ಯಾಪ್ ಡೀಲ್ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವ್ಯಾಪಾರ ಹೆಚ್ಚಾಗಿದೆ. ಹಬ್ಬದ ಸಮಯದಲ್ಲಿ ಗ್ರಾಹಕರು ಇ-ಕಾಮರ್ಸ್ ಕಂಪನಿಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿ ಮಾಡ್ತಿದ್ದಾರೆ. ಇ-ಕಾಮರ್ಸ್ ಕಂಪನಿಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲರ ನಡುವೆ ದೊಡ್ಡ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಎಲ್ಲ ಕಂಪನಿಗಳು ಭರ್ಜರಿ ಆಫರ್ ನೀಡ್ತಾಯಿವೆ. ಈ ಬಾರಿ ಸ್ನ್ಯಾಪ್ ಡೀಲ್ ಉತ್ತಮ ತಂತ್ರ ರೂಪಿಸಿ ಗ್ರಾಹಕರನ್ನು ಸೆಳೆದಿದೆ ಎಂದು ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...