alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಬಳಸ್ತೀರಾ..? ಇದನ್ನೊಮ್ಮೆ ಓದಿ

ಆಧಾರ್ ಕಾರ್ಡ್ ಮತ್ತು ಪಾನ್ ನಂಬರ್ ಲಿಂಕ್ ಮಾಡೋದ್ರಿಂದ ಸಾರ್ವಜನಿಕರ ಗೌಪ್ಯತೆಗೆ ಧಕ್ಕೆ ಬರುತ್ತದೆ ಅನ್ನೋ ಆರೋಪವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲೂ ವಿಚಾರಣೆ ನಡೆಯುತ್ತಿದೆ. ಆದ್ರೀಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರೋ ಸ್ಮಾರ್ಟ್ ಫೋನ್ ಗಳೇ ಗೌಪ್ಯತೆಗೆ ಧಕ್ಕೆ ತರುತ್ತಿವೆ.

ಭಾರತದಲ್ಲಿ ಶೇ.40 ರಷ್ಟು ಜನರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಡೇಟಾವನ್ನು ಇಡೀ ಜಗತ್ತಿಗೇ ಶೇರ್ ಮಾಡಿದ್ದಾರೆ. ಈ ಆಘಾತಕಾರಿ ಅಂಶವನ್ನು ನಿವೃತ್ತ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಬಹಿರಂಗಪಡಿಸಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಎದುರು ಈ ಮಾಹಿತಿ ನೀಡಿದ್ದಾರೆ. ಖಾಸಗಿ ಕಂಪನಿಗಳ ಜೊತೆಗೆ ಡೇಟಾ ಹಂಚಿಕೊಳ್ತಾ ಇರೋದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಅಂತಾ ಅವರು ಅಭಿಪ್ರಾಯಪಟ್ಟಿದ್ದಾರೆ. ಶೇ.40 ರಷ್ಟು ಭಾರತೀಯರ ಬಯೋಮೆಟ್ರಿಕ್ಸ್ ಹಾಗೂ ಬೆರಳಚ್ಚು ಕೂಡ ಕ್ಯಾಪ್ಚರ್ ಆಗ್ತಿದೆ ಅಂತಾ ಎಚ್ಚರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...