alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಗಳ ಮಾರಾಟ ಕುರಿತು ಇಲ್ಲಿದೆ ಒಂದು ಇಂಟ್ರಸ್ಟಿಂಗ್ ಮಾಹಿತಿ

ಸ್ಮಾರ್ಟ್ ಫೋನ್ ಗಳ ಬಳಕೆ ಇಂದು ವ್ಯಾಪಕವಾಗಿದ್ದು, ಫೋನ್ ತಯಾರಿಕಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಸ್ಮಾರ್ಟ್ ಫೋನ್ ಇಂದು ಬಹುತೇಕರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಸ್ಮಾರ್ಟ್ ಫೋನ್ ಗಳ ಮಾರಾಟ ಕುರಿತು ಈಗ ಹೊರ ಬಿದ್ದಿರುವ ಮಾಹಿತಿಯೊಂದು ಕುತೂಹಲಕಾರಿಯಾಗಿದೆ.

2004 ರಲ್ಲಿ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇಲ್ಲಿಯವರೆಗೂ ಏರುಗತಿಯಲ್ಲಿದ್ದ ಇವುಗಳ ಮಾರಾಟ ಇದೇ ಮೊದಲ ಬಾರಿಗೆ ಕುಸಿತ ಕಂಡಿದೆ ಎಂದು ವರದಿಯೊಂದು ಹೇಳಿದೆ. 2017 ರ ಕೊನೆಯ ಮೂರು ತಿಂಗಳ ಅವಧಿಯಲ್ಲಿ ವಿಶ್ವದಾದ್ಯಂತ ಒಟ್ಟು 40.8 ಕೋಟಿ ಸ್ಮಾರ್ಟ್ ಫೋನ್ ಗಳ ಮಾರಾಟವಾಗಿದೆ ಆದರೆ 2016 ರ ಇದೇ ಅವಧಿಯಲ್ಲಿ 43.1 ಕೋಟಿ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದವು ಎಂದು ಹೇಳಲಾಗಿದೆ. ಮಾರಾಟದಲ್ಲಿ ಶೇ.5.6 ರಷ್ಟು ಕುಸಿತ ಕಂಡಿರುವುದನ್ನು ವರದಿ ಹೇಳಿದೆ.

ವಿಶ್ವದಾದ್ಯಂತದ ಮಾರಾಟದಲ್ಲಿ ಸ್ಯಾಮ್ಸಂಗ್ ಮೊದಲ ಸ್ಥಾನದಲ್ಲಿದ್ದರೆ ಆಪಲ್ ಕಂಪನಿ ದ್ವಿತೀಯ ಸ್ಥಾನದಲ್ಲಿದೆ. ಹುವೈ ಮೂರನೇ, ಒಪ್ಪೋ ನಾಲ್ಕನೇ ಹಾಗೂ ವಿವೋ ಐದನೇ ಸ್ಥಾನದಲ್ಲಿವೆ. ಗಮನಿಸಬೇಕಾದ ಸಂಗತಿಯೆಂದರೆ 2017 ರಲ್ಲಿ ಹುವೈ ಹಾಗೂ ಕ್ಸಿಯೋಮಿ ಸ್ಮಾರ್ಟ್ ಫೋನ್ ಗಳು ಮಾತ್ರ ಹಿಂದಿನ ಅವಧಿಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಏರಿಕೆ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...