alex Certify
ಕನ್ನಡ ದುನಿಯಾ       Mobile App
       

Kannada Duniya

ಇಳಿಕೆಯಾಯ್ತು ಸಣ್ಣ ಉಳಿತಾಯದ ಬಡ್ಡಿ ದರ

ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ. ಸಾರ್ವಜನಿಕ ಪಿಂಚಣಿ ಯೋಜನೆ(ಪಿ.ಪಿ.ಎಫ್.), ರಾಷ್ಟ್ರೀಯ ಉಳಿತಾಯ ಯೋಜನೆ(ಎನ್.ಎಸ್.ಎಸ್.) ಸೇರಿದಂತೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ.

ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು 20 ಮೂಲಾಂಕದಷ್ಟು ಕಡಿತ ಮಾಡಲಾಗಿದೆ. 2018 ರ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕಕ್ಕೆ ಇದು ಅನ್ವಯವಾಗಲಿದೆ. 1 ವರ್ಷದವರೆಗಿನ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ. 6.8 ರಿಂದ ಶೇ. 6.6 ಕ್ಕೆ ಇಳಿಕೆ ಮಾಡಲಾಗಿದೆ.

ಅದೇ ರೀತಿ 2 ವರ್ಷದ ಸಣ್ಣ ಉಳಿತಾಯದ ಠೇವಣಿಯ ಮೇಲಿನ ಬಡ್ಡಿ ದರವನ್ನು ಶೇ. 6.7 ಕ್ಕೆ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಶೇ. 7.6 ವಿಧಿಸಲಾಗಿದೆ. ಸರ್ಕಾರ ಬುಧವಾರ ಈ ಕ್ರಮ ಕೈಗೊಂಡಿದ್ದು, ಬ್ಯಾಂಕ್ ಗಳ ಠೇವಣಿಗಳ ಮೇಲಿನ ಬಡ್ಡಿ ದರ ಕೂಡ ಕಡಿತವಾಗುವ ಸಾಧ್ಯತೆ ಇದೆ. 2016 ರ ಏಪ್ರಿಲ್ ನಿಂದ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳನ್ನು ಸರ್ಕಾರದ ಬಾಂಡ್ ಗಳಿಗೆ ಜೋಡಣೆ ಮಾಡಲಾಗಿದ್ದು, ತ್ರೈ ಮಾಸಿಕ ಆಧಾರದಲ್ಲಿ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...